Coastal Bulletin

ಬಂಟ್ವಾಳ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮ ಜ.16ರಂದು ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೈವ, ದೇವ ಅನುಗ್ರಹದಿಂದ ಪಟ್ಲ ಫೌಂಡೇಶನ್ ಮೂಲಕ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗಿದೆ. ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ  ಪ್ರೋತ್ಸಾಹ, ಪರಿಶ್ರಮ ಅಭಿನಂದನೀಯ ಎಂದ ಅವರು ಪುರುಷೋತ್ತಮ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಂಘಟನಾತ್ಮಕವಾಗಿ ಪುಂಜಾಲಕಟ್ಟೆ ಘಟಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.  

ಫೌಂಡೇಶನ್ ಬೆಳ್ತಂಗಡಿ ಘಟಕಾಧ್ಯಕ್ಷ ಭುಜಬಲಿ ಧರ್ಮಸ್ಥಳ ಅವರು ಅತಿಥಿಯಾಗಿ ಮಾತನಾಡಿ,  ಯಕ್ಷ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಕಾರ್ಯ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾದರಿ ಸಂಘಟನೆಯಾಗಿದೆ. ಸಂಸ್ಕಾರಯತ ಜೀವನಕ್ಕೆ ಯಕ್ಷಗಾನ ಸಂಪರ್ಕ ಸಾಧನವಾಗಿದೆ ಎಂದರು.

ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ,ಕಾವಳಪಡೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪ್ರಗತಿಪರ ಕೃಷಿಕರಾದ ಜಯಚಂದ್ರ ಬೊಳ್ಮಾರ್, ಸುಧಾಕರ ಶೆಣೈ ಖಂಡಿಗ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಜನಜಾಗೃತಿ ವೇದಿಕೆ ವಗ್ಗ ವಲಯ ಅಧ್ಯಕ್ಷ ಹರೀಂದ್ರ ಪೈ ನಯನಾಡು,   ಘಟಕ ಗೌರವಾಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಅಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್

ಶೆಟ್ಟಿ ಮಜಲೋಡಿ,  ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ಅಧ್ಯಕ್ಷೆ ತುಳಸಿ ಹಾರಬೆ, ಘಟಕ ಪದಾಽಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಹಿರಿಯ ಭಾಗವತ ಸುಬ್ರಾಯ ಕಕೃಣ್ಣಾಯ ಮತ್ತು ಯಕ್ಷ ಪ್ರತಿಭೆ ಚೈತ್ರಾ ಅಶ್ವಿನ್ ಕುಮಾರ್, ಸೇವಾಕರ್ತೃಗಳಾದ ಚಿದಾನಂದ ಕುಕ್ಕಳ, ಧ್ರುವಿ, ಸುರೇಶ್ ಶೆಟ್ಟಿ ಮಜಲೋಡಿ, ಸೌಮ್ಯಾ,   ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್  ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಘಟಕ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಬುಳೆಕ್ಕಿನಕೋಡಿ, ಯಕ್ಷಗುರುಗಳಾದ ದಿನೇಶ್ ಶೆಟ್ಟಿ ಕಾವಳಕಟ್ಟೆ, ದೇವೀಪ್ರಸಾದ್ ಆಚಾರ್ಯ ಗುರುವಾಯನ ಕೆರೆ ಅವರನ್ನು ಸಮ್ಮಾನಿಸಲಾಯಿತು.

ಮಧ್ಯಾಹ್ನ ಘಟಕದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾಂಶುಪಾಲ ಉದಯ ಕುಮಾರ್ ಜೈನ್ ಅವರು ಉದ್ಘಾಟಿಸಿದರು. ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ಪಿಲಾತಬೆಟ್ಟು ಹಾ.ಉ.ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪಿ.ಎಂ.ಪ್ರಭಾಕರ ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ದಿನಕರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಮಹಿಳಾ ಘಟಕ ಸಂಚಾಲಕಿ ಶೋಭಾ ವಿಜಯ ಕುಮಾರ್ ಶೆಟ್ಟಿ ವಂದಿಸಿದರು.ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.      

ಬಳಿಕ ಪಾವಂಜೆ ಮೇಳದವರಿಂದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Comment