ಕೊರೋನಾದ ಪ್ರಕರಣಗಳು ಕಡಿಮೆಯಾಗುತ್ತಿದ್ದ ಹಾಗೆ ಭಾರತ ಸೇರಿ ಹಲವು ದೇಶಗಳು ತಮ್ಮ ಕೆಲಸಗಳನ್ನು ಶುರುಮಾಡಿದೆ. ಭಾರತ ನಿರ್ಬಂಧ ಹೇರಿದ್ದ ಅಂತರಾಷ್ಟ್ರೀಯ ವಿಮಾನಯಾನವನ್ನು ಶುರುಮಾಡಿದೆ. ಆದರೆ, ಇದೀಗ ಚೀನಾ ಒಂದು ಶಾಂಕಿಗ್ ನ್ಯೂಸ್ ಕೊಟ್ಟಿದೆ.ಚೀನಾದ ಚಾಂಗ್‌ಚನ್ ಪ್ರಾಂತ್ಯದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಈಗ ಒಂದೇ ದಿನದಲ್ಲಿ 1,000 ಪ್ರಕರಣಗಳ ಗಡಿ ದಾಟಿವೆ.
ಆದ ಕಾರಣ ಚೀನಾ ಸರ್ಕಾರ ಲಾಕ್ ಡೌನ್ ಮಾಡಿದೆ.ಚಾಂಗ್‌ಚನ್ ಪ್ರಾಂತ್ಯದ ಹಲವು ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿದ್ದು, ಇದು ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಚೀನಾದಲ್ಲಿ ಕ್ಷಿಪ್ರಗತಿಯಲ್ಲಿ ಅತೀ ದೊಡ್ಡ ಕೊರೋನಾ
ಸ್ಫೋಟ ಎಂದು ಹೇಳಲಾಗುತ್ತಿದೆ.
ಚೀನಾ ಸರ್ಕಾರ ಕೊರೋನಾ ನಿಯಂತ್ರಿಸಲು ವಾಪಾಸು ಲಾಕ್ ಡೌನ್ ಮಾಡಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.ಯಾರು ಕೂಡ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ನಿರ್ಬಂಧಿಸಲಾಗಿದೆ.















