Coastal Bulletin

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮಪಂಚಾಯತ್ ನಲ್ಲಿ ಶನಿವಾರ ಸಂಜೆ ಮಿಂಚಿನ ಸಂಚಾರ ನಡೆಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು

ಗ್ರಾಮಪಂಚಾಯತ್ ನ ಸಭಾಭವನವನ್ನು ಉದ್ಘಾಟಿಸಿದ ಶಾಸಕರು ಗ್ರಾಮಪಂಚಾಯತ್ ನ ಮೇಲ್ಛಾವಣಿ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನೇರಳಕಟ್ಟೆ ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಕಟ್ಟಡವನ್ನು ಉದ್ಘಾಟಿಸಿದರು. ನಂತರ ಏಮಾಜೆ ಶಾಲೆಗೆ ಭೇಟಿ‌ ನೀಡಿದ ಶಾಸಕರು, ನೂತನ ಕೊಠಡಿಯನ್ನು ಉದ್ಘಾಟಿಸಿದ ಬಳಿಕ ಆವರಣ ಗೋಡೆ, ಇಂಟರ್‌ಲಾಕ್, ಕೈತೊಳೆಯುವ ವ್ಯವಸ್ಥೆ, ಶಾಲಾ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ‌ ಭಾಗಿಯಾದರು.

ಈ ಸಂದರ್ಭ ನೆಟ್ಲ ಮುಡ್ನೂರು ಗ್ರಾ.ಪಂ‌. ಅಧ್ಯಕ್ಷ ಸತೀಶ್ ಪೂಜಾರಿ, ಜಿ.ಪಂ.ಮಾಜಿ ಸದಸ್ಯೆ ಮಂಜುಳಾ

ಮಾವೆ, ಉಪಾಧ್ಯಕ್ಷೆ ಶಕೀಲಾ ಕೃಷ್ಣ ಪೂಜಾರಿ, ಡಾ. ಅಶ್ವಿನ್ ಆಳ್ವ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ ರೈ, ಧನಂಜಯ ಮಿನಾವು, ನೇರಳ ಕಟ್ಟೆ ಸಿಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸನತ್ ಕುಮಾರ್ ರೈ, ಡಾ.ಮನೋಹರ ರೈ, ಜಯರಾಮ ರೈ, ನೇರಳಕಟ್ಟೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬೂಬಕರ್,ಏಮಾಜೆ ಶಾಲಾಭಿವೃದ್ಧಿ ಮಲ್ಲಿಕಾ ಪ್ರಸಾದ್, ಶಾಲಾಮುಖ್ಯಶಿಕ್ಷಕಿ ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.

Leave a Comment