ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಕೇವಲ ಎರಡೇ ವಾರಕ್ಕೆ ಬಂದ್!

Coastal Bulletin
ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಕೇವಲ ಎರಡೇ ವಾರಕ್ಕೆ ಬಂದ್!

ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋಗೆ ಆರಂಭದಲ್ಲೇ ಒಂದು ವಿಘ್ನ ಎದುರಾಗಿದೆ. ಸರಿಯಾದ ರೀತಿಯಲ್ಲಿ ತಾಜ್ಯ ವಿಲೇವಾರಿ ಮಾಡದ ಕಾರಣದಿಂದ ಕಾನೂನಿನ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಮನಗರದ ಬಿಡದಿ ಬಳಿಯ 35 ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ಪ್ರತ್ಯೇಕ ಸೆಟ್ ಗಳನ್ನು ಹಾಕಿ ಕನ್ನಡ ಬಿಗ್ ಬಾಸ್ ಸೀಜನ್ - 12ನ್ನು ನಡೆಸಲಾಗುತ್ತಿತ್ತು. ಆದರೆ ಬಿಗ್ ಬಾಸ್ ಶೋ ಹಾಗೂ ಸೆಟ್ ಗಳಲ್ಲಿ ಮಾಲಿನ್ಯ ನಿಯಂತ್ರಣದ ನಿಯಮ ಉಲ್ಲಂಘನೆ ಮಾಡಲಾಗಿದೆ. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘನೆ ಮಾಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು.

ನೋಟಿಸ್‌ ನೀಡಲೆಂದು ಜಾಲಿವುಡ್ ಸ್ಟುಡಿಯೋ ಸ್ಥಳಕ್ಕೆ ತೆರಳಿದಾಗ ಜಾಲಿವುಡ್ ಸ್ಟುಡಿಯೋಸ್ ಆಗಲಿ, ಬಿಗ್

ಬಾಸ್ ಶೋ ಟೀಂ ಆಗಲಿ ನೋಟಿಸ್ ತೆಗೆದುಕೊಳ್ಳಲು ಹಿಂದೇಟು ಹಾಕಿವೆ. ಈ ಹಿನ್ನೆಲೆಯಲ್ಲಿ ಬಿಡದಿ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಉದ್ರೆ ಹಾಕಿದ್ದಾರೆ, ಬಿಗ್ ಬಾಸ್ ಶೋ ಹೌಸ್ ಗೂ ಬೀಗ ಜಡಿಯಲಾಗಿದ್ದು, ಬಿಗ್ ಬಾಸ್ ಶೋ ಬಂದ್ ಆಗಿದೆ.

ಬಿಗ್ ಬಾಸ್ ಸ್ಪರ್ಧಿಗಳನ್ನು ಸ್ಥಳದಿಂದ ಹೊರಕಳುಹಿಸಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿಯೇ ಜಾಲಿವುಡ್ ಸ್ಟುಡಿಯೋ ಗೆ ಬೀಗ ಹಾಕಲಾಗಿದ್ದು, ಸದ್ಯ ಬಿಗ್ ಬಾಸ್ ಕಾರ್ಯಕ್ರಮ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

Leave a Comment