Coastal Bulletin

ಅರು ವರ್ಷದ ಬಾಲಕಿಯನ್ನು ಮೂರು ವರ್ಷ ಅತ್ಯಾಚಾರ ಮಾಡಿ ನೇಣು ಬಿಗಿದು ಕೊಲೆ ಮಾಡಿರುವ ಭೀಕರ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು, ಈ ಸಂಬಂಧ ಡಿವೈಎಪ್ಐ ಕಾರ್ಯಕರ್ತ 22 ವರ್ಷದ ಅರ್ಜುನ್ ಎಂಬ ಕಾಮುಕನನ್ನು ಬಂಧಿಸಲಾಗಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಯುವ ವಿಭಾಗದ ನಾಯಕನಾಗಿದ್ದ ಅರ್ಜುನ್ ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡಿಸುವ ಅಮಿಷವೊಡ್ದಿ ಆಕೆಯನ್ನು ಅತ್ಯಾಚಾರವೆಸಗುತ್ತಿದ್ದ . ಅದೇ ರೀತಿ ಜೂನ್ 30ರಂದು ಆಕೆಯ ಮನೆಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. ಆಕೆ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ ಆತ ಆಕೆಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದ. 

ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೋಡಿ, “ಜೂನ್ 30 ರಂದು ಸಂಭವಿಸಿದ ಘಟನೆ ಆಕಸ್ಮಿಕ ಸಾವು ಎಂದು ವರದಿಯಾಗಿತ್ತು. ಬಾಲಕಿ ಆಟವಾಡುತ್ತಿದ್ದ ಶಾಲು ಆಕಸ್ಮಿಕವಾಗಿ ಅವಳ ಕುತ್ತಿಗೆಗೆ ಸಿಲುಕಿಕೊಂಡಿದೆ ಎಂದು ನಮಗೆ ತಿಳಿಸಲಾಯಿತು. ಬಾಲಕಿಯ ಮೃತದೇಹವನ್ನು ಆಕೆಯ ಅಪ್ರಾಪ್ತ

ಸಹೋದರ ಮೊದಲು ಮನೆಯ ಕೋಣೆಯಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ನೋಡಿದ್ದ. ಘಟನೆ ನಡೆದಾಗ ಬಾಲಕಿ ಪೋಷಕರು ಕೆಲಸದ ಕಾರಣದಿಂದ ಮನೆಯಿಂದ ಹೊರಹೋಗಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಆಕೆ ದೀರ್ಘಕಾಲದವರೆಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂತು. ಇದರ ಬೆನ್ನಲ್ಲೇ, ಈ ಪ್ರಕರಣವು ಕೊಲೆ ಪ್ರಕರಣ ಎಂದು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

 ಇನ್ನು ಅತ್ತ ಕಡೆ ಆರೋಪಿ ಅರ್ಜುನ್ ಘಟನೆಯ ನಂತರ ಭಯಭೀತನಾಗಿದ್ದು ಹೀಗಾಗಿ ಬಾಲಕಿಯ ಆಕಸ್ಮಿಕ ಸಾವಿನ ವದಂತಿಯನ್ನು ಹರಡಿ ತನಿಖೆಯ ಹಾದಿ ತಪ್ಪಿಸಿದ್ದ. ಶವ ಪರೀಕ್ಷೆ ವರದಿಯ ಆಧಾರದಲ್ಲಿ  ತನಿಖೆ ನಡೆಸಿ ನಾಲ್ವರು ಶಂಕಿತರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ಅರ್ಜುನ್ ಕೈವಾಡ ಬಯಲಾಯಿತು" ಎಂದು ಹೇಳಿದ್ದಾರೆ.

Leave a Comment