Coastal Bulletin

ಬಾಂಗ್ಲಾ :ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ 2,600 ಕೆ.ಜಿ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ.ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು 260 ಪೆಟ್ಟಿಗೆಯಲ್ಲಿ ಹೊತ್ತ ಟ್ರಕ್ ಭಾರತದ ಗಡಿ ದಾಟಿದೆ.

ಬಾಂಗ್ಲಾದೇಶದ ರಂಗ್ ಪುರ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆದ ಈ ಮಾವಿನ ಹಣ್ಣುಗಳನ್ನು ಬೆನಾಪೋಲ್ ಚೆಕ್ ಪಾಯಿಂಟ್ ಮೂಲಕ ಕಳುಹಿಸಲಾಗಿದೆ. ಉಭಯ ದೇಶಗಳ ನಡುವಿನ ಬಾಂಧ್ಯವದ ಸಂಕೇತವಾಗಿ ಇದನ್ನು ಕಳುಹಿಸಲಾಗಿದೆ ಎಂದು ಬಾಂಗ್ಲಾ ಪ್ರಧಾನಿ ಹೇಳಿದ್ದಾರೆ.

268px;">

ಹರಿಬಾಂಗ ಮಾವಿನಹಣ್ಣು ದುಂಡಾಗಿದೆ. ಹೆಚ್ಚು ತಿರುಳಿರುವ, ನಾರಿನಂಶವಿಲ್ಲದ ಮತ್ತು ಸಾಮಾನ್ಯವಾಗಿ 200 ರಿಂದ 400 ಗ್ರಾಂ ತೂಕವಿರುತ್ತದೆ.ಈ ಹಿಂದೆ ಭಾರತಕ್ಕೆ ಪಾಕಿಸ್ತಾನದ ಯುಟ್ಯೂಬ್ ಪ್ರಧಾನಿಯಾಗಿದ್ದ ಜಿಯಾ ಉಲ್ ಹಖ್ ಹಾಗೂ ಪರ್ವೇಜ್ ಮುಷರಫ್ ಸಹ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು.

Leave a Comment