ಬಂಟ್ವಾಳ :ದಕ್ಷಿಣ ಭಾರತದ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರ ದಲ್ಲಿ ಶ್ರೀ ಭಕ್ತಿ ಭೂಷಣದಾಸ್ ಪ್ರಭುಜಿ ಯವರ ಮಾರ್ಗದರ್ಶನ ದಲ್ಲಿ ಧರ್ಮ ರಕ್ಷಾರ್ಥ , ರಾಷ್ಟ್ರ ರಕ್ಷಾರ್ಥ, ಗೋ ರಕ್ಷಾರ್ಥ, ಉದ್ದೇಶದೊಂದಿಗೆ 45 ದಿನಗಳ ಗೋ ರಥಯಾತ್ರೆಯ ಮೂಲಕ ನಡೆದ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ, ನವರಾತ್ರಿ ಉತ್ಸವ ಹಾಗೂ ನಾರಾಯಣ ಕವಚ ಮಹಾಯಾಗವು ನ.22ರಂದು ಸಂಪನ್ನ ಗೊಂಡಿತ್ತು.
ಮಹಾಯಾಗದ ಸಮಾರೋಪ ಸಮಾರಂಭದಲ್ಲಿ ಉಡುಪಿ ಅದಮಾರು ಮಠದ ಈಶ ಪ್ರಿಯ ತೀರ್ಥ ಪಾಂದಗಳ ಸ್ವಾಮೀಜಿಯವರು ಆಶೀರ್ವಾಚನ ನೀಡಿ, ಯಾವುದೇ ಕೆಲಸದ ಹಿಂದೆ ಸಮಾಜಕ್ಕೆ ಒಳಿತಾಗುವ ಚಿಂತನೆ ಇರಬೇಕು, ಪ್ರತಿಯೊಂದು ಕೆಲಸ ದೇವರ ಕೆಲಸವಾಗಬೇಕು, ಭಾಗವತದ ಪ್ರತಿಯೊಂದು ಅರ್ಥದಲ್ಲಿಯೂ ನಾವು ದೇವರನ್ನು ಕಾಣುತ್ತೆವೆ,ಆದ್ದರಿಂದ ಭಕ್ತಿ ಮಾರ್ಗದಲ್ಲಿ ಸಾಗೋಣ,ಬಹಳ ಶ್ರದ್ದೆಯಿಂದ ಗೋ ರಕ್ಷಣೆ ಹಾಗೂ ಉತ್ಪನ್ನಗಳ ಮಹತ್ವವನ್ನು ಅರಿತು ಗೋ ನವರಾತ್ರಿ ಉತ್ಸವದ ಮೂಲಕ ಭೂಮಿ ಪವಿತ್ರವಾಗಿದೆ, ದಿನದ ಕನಿಷ್ಠ ಸಮಯವನ್ನಾದರೂ ಭಾಗವತ ಶ್ರವಣ ಮಾಡಲು ಪ್ರಯತ್ನಿಸೋಣ, ನಾವು ಬೆಳೆದು ರಾಷ್ಟ್ರವನ್ನು ಬೆಳೆಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಯಾಗದಲ್ಲಿ ಉತ್ಪತ್ತಿಯಾದ ದಿವ್ಯ
ಔಷದಿಯನ್ನು ಸಂಕೇತಿಕವಾಗಿ ವಿತರಿಸಿದರು ಹಾಗೂ ಧರ್ಮಧಿಕಾರಿ ಸೇವೆಯನ್ನು ಮಾಡಿದ ಸೇವಾರ್ಥಿಗಳನ್ನು ಸ್ವಾಮೀಜಿಯವರು ಹರಸಿ ಹಾರೈಸಿದರು.
ವೇದಿಕೆಯಲ್ಲಿ ವೃಂದಾವನದ ಬ್ರಿಜೇಶ್ ಗೊಸ್ವಾಮಿ ರಾಷ್ಟ್ರೀಯ ಗೋ ಸೇವಾ ಗತಿವಿಧಿಯ ಅಜಿತ್ ಮಹಾಪಾತ್ರ, , ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ, ಗೋ ಸೇವಾ ಗತಿವಿಧಿಯ ಪ್ರವೀಣ್ ಸರಳಾಯ,ಶೋಭಾ ಮಯ್ಯಜಿ, ರೂಪಾ ಮಾತಾಜಿ ಸಮಿತಿಯ ಪದಾಧಿಕಾರಿಗಳಾದ ವಿಜಯ ಪ್ರಕಾಶ ಮಲ್ಪೆ,ಎಂ ಆರ್ ನಾಯರ್, ರಾಮಚಂದ್ರ ಮಾರಿಪಲ್ಲ,ಪದ್ಮನಾಭ ಶೆಟ್ಟಿ, ಅನಿಲ್ ಪಂಡಿತ್, ವಸಂತಿ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿ,ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ, ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು,














