Coastal Bulletin

ಬಂಟ್ವಾಳ :ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಸಿರೋಡಿನಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಮತಯಾಚನೆ ನಡೆಸಿದರು.

ರೋಡ್ ಶೋ  ನಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮೊದಲು ಕನ್ನಡದಲ್ಲಿ ಭಾಷಣ ಮಾಡಿದರು. ಪೊಳಲಿ ರಾಜರಾಜೇಶ್ವರಿ ದೇವಿಗೆ ನನ್ನ ನಮಸ್ಕಾರಗಳು, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿಗೆ ಕೋಟಿ ಕೋಟಿ ನಮಸ್ಕಾರಗಳು, ಭಗವಾನ್ ಪರಶುರಾಮ ಭೂಮಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿದರು.


ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ವಿಕಾಸದ ಮೂಲಕ ನಿಮ್ಮ ಮುಂದೆ ಬಂದಿದೆ. ಕಾಂಗ್ರೆಸ್ ರಾಷ್ಟ್ರ ವಿರೋಧ ಮತ್ತು ನಕಾರಾತ್ಮಕ ವಿಷಯಗಳ ಮೂಲಕ ಬಂದಿದೆ. ಇವತ್ತು ಭಾರತವನ್ನು ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಲಾಗ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದ್ರೆ ಭಜರಂಗದಳ ಬ್ಯಾನ್ ಮಾಡ್ತೀವಿ ಅಂತಿದ್ದಾರೆ. ಭಜರಂಗದಳ ‌ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ

ಸಂಘಟನೆ. ಭಜರಂಗದಳ ರಾಷ್ಟ್ರವಾದಿ ಸಂಘಟನೆ, ಕರ್ನಾಟಕದ ಜನರ ಜೊತೆ ಇದು ನಡೆಯಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನ ಗೆಲ್ಲಿಸಿ, ಅಭಿವೃದ್ಧಿ ‌ಮತ್ತು‌ ರಾಷ್ಟ್ರವಾದ ಗೆಲ್ಲಲು ಬಿಜೆಪಿ ಗೆಲ್ಲಿಸಿ, ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಭಜರಂಗಿ ಬಳಿಯ ಜನ್ಮಸ್ಥಳದ ಕರ್ನಾಟಕದ ಜನರಿಗೆ ಆಮಂತ್ರಣ ನೀಡ್ತಾ ಇದೀನಿ. ಇಡೀ ಉತ್ತರ ಪ್ರದೇಶ ನಿಮ್ಮನ್ನ ರಾಮನ ಜನ್ಮ ಭೂಮಿಗೆ ಸ್ವಾಗತಿಸುತ್ತಿದೆ ಎಂದು ಹೇಳಿದರು.

ಇನ್ನು ಬಂಟ್ವಾಳ ರೋಡ್ ಶೋ ಮುಗಿಸಿ ಕತ್ತಲಾದ ಹಿನ್ನೆಲೆ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಯೋಗಿ ಆದಿತ್ಯನಾಥ್ ಅವರು ಮಂಗಳೂರು ಏರ್ಪೋರ್ಟ್ ನತ್ತ ತೆರಳಿದ್ದಾರೆ. ಏರ್ಪೋರ್ಟ್ ನಿಂದ ವಿಶೇಷ ವಿಮಾನದ ಮೂಲಕ ಲಕ್ನೋಗೆ ಪ್ರಯಾಣ ಮಾಡಿದ್ದಾರೆ..

Leave a Comment