Coastal Bulletin

ಮಂಗಳೂರು: ‌ಹಂಪನಕಟ್ಟೆಯ ಬಲ್ಮಠ ರಸ್ತೆಯಲ್ಲಿರುವ ಕ್ರಿಸ್ಟಲ್ ಆರ್ಕೇಡ್ ನಲ್ಲಿ ಯು.ಐ.ಡಿ.ಎ.ಎ ವತಿಯಿಂದ ಹೊಸದಾಗಿ ಆಧಾರ್ ಸೇವಾ ಕೇಂದ್ರವು ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಇವರ ಉಪಸ್ಥಿತಿಯಲ್ಲಿ ಮೇ.10ರಂದು ಉದ್ಘಾಟನೆಯಾಗಲಿದೆ.

ಈ ಆಧಾರ್ ಕೇಂದ್ರವು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಕಾರ್ಯನಿರ್ವಹಿಸಲಿದೆ. ಆಧಾರ್

ಗೆ ಸಂಬಂಧಿಸಿದ ಎಲ್ಲಾ ನೋಂದಣಿ ಮತ್ತು ತಿದ್ದುಪಡಿ ಮಾಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.

Leave a Comment