ಮಾಣಿಲ : ತಾ.5-01-2023 ರಂದು ಶ್ರೀ ಧಾಮ ಮಾಣಿಲದಲ್ಲಿ ಶ್ರೀಮತಿ ನಿರ್ಮಲ ಸೇಸಪ್ಪ ಕುಲಾಲರ ಮಣ್ಣ್ ದ ಋಣೊ ಎಂಬ ತುಲು ಕವನ ಸಂಕಲನವನ್ನು ಮಾಣಿಲ ಕ್ಷೇತ್ರದ ಶ್ರೀ ಶ್ರೀ,ಯೋಗಿಕೌಸ್ತುಭ, ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯಹಸ್ತದಿಂದ ಲೋಕಾರ್ಪಣೆಗೊಂಡಿತು.
ಪ್ರಸಿದ್ಧ ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಕೃತಿ ಪರಿಚಯ ಮಾಡಿದರು. ಆಕಾಶವಾಣಿ ನಿರೂಪಕರಾದ ಪ್ರವೀಣ್ ಅಮ್ಮೆಂಬಳ ಹಾಗೂ ಶ್ರೀಯುತ ಸೀತಾರಾಮ ಒಳಮೊಗರು, ಅಧ್ಯಕ್ಷರು ಕುಲಾಲ ಸಮಾಜ ಎಣ್ಮೆಕಜೆ ಪಂಚಾಯತ್ ಸಮಿತಿ, ಹಿರಿಯ ಸಾಹಿತಿ ಬಿ.ವಿ ಕುಲಮರ್ವ ಹಾಗೂ ಇತರ ಗಣ್ಯರು ಶುಭಾಶಂಸನೆಗೈದರು.
ನಂತರ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ರವರ ಅಧ್ಯಕ್ಷತೆ ಯಲ್ಲಿ ಕವಿಗೋಷ್ಠಿ ನಡೆಯಿತು.
ವಸಂತ ಬಾರಡ್ಕ ತಂಡದವರಿಂದ ಭಕ್ತಿ ಗಾಯನ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಶ್ವೇತಾ ಖಂಡಿಗೆ ರವರು ಪ್ರಾರ್ಥನೆ ಗೈದು,ಶ್ರೀಮತಿ ವನಜಾಕ್ಷಿ ಚಂಬ್ರಕಾನ ಸ್ವಾಗತಿಸಿದರು. ಕೃತಿ ಕರ್ತೆ ಶ್ರೀಮತಿ ನಿರ್ಮಲ ಸೇಸಪ್ಪ ಕುಲಾಲರು ಬರವಣಿಗೆಯ ಹಾದಿಯಲ್ಲಿ ತಮ್ಮ ಅನುಭವ ಹಾಗೂ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು. ಸುಂದರ ಬಾರಡ್ಕ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ವನ್ನು ಜಯರಾಜ್ ಮಣಿಯಂಪಾರೆ ನಿರೂಪಿಸಿದರು.














