ಕಟ್ಟೆಮಾರ್: ಪೆ.10ರಂದು ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವ.

Coastal Bulletin
ಕಟ್ಟೆಮಾರ್: ಪೆ.10ರಂದು ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವ.

ಬಂಟ್ವಾಳ ತಾಲೂಕಿನ ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವವು ಪೆಬ್ರವರಿ 10 ಶನಿವಾರದಂದು ನಡೆಯಲಿದೆ.

ಬೆಳಿಗ್ಗೆ ಗಣಹೋಮ, ನಂತರ ಶ್ರೀ ಕೃಷ್ಣ ಭಜನಾ ಮಂದಿರ ಅಮ್ಮ್ಟೂರ್, ರಾಮಕೃಷ್ಣ ಬಾಲಗೋಕುಲ ಮಲ್ಲೂರು, ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ಭಜನಾ ಮಂಡಳಿ ಬದನಡಿ ಕೊಯಿಲ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಲಿದ್ದು, ನಂತರ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.  

ಸಾಯಂಕಾಲ ಗಂಟೆ 4 ರಿಂದ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜಯಗಳಿದ್ದು, ನಂತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಹನುಮಾನ್ ಫ್ರೆಂಡ್ಸ್ ಅಮ್ಮ್ಟೂರ್ ಪ್ರಾಯೋಜಕತ್ವದಲ್ಲಿ "ಯಕ್ಷಗಾನ ಹಾಸ್ಯ ವೈಭವ " ಜರಗಲಿದ್ದು ಪ್ರಸಿದ್ಧ ಯಕ್ಷಗಾನ ಹಾಡುಗಾರರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಶ್ರೀಮತಿ ಅಮೃತ ಅಡಿಗ ರವರ ಹಾಡುಗಾರಿಕೆ, ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ಕೋಡಪದವು, ದಿನೇಶ್ ರೈ ಕಡಬ, ರಕ್ಷಿತ್ ಶೆಟ್ಟಿ ಪಡ್ರೆ, ಲೋಕೇಶ್ ಮಚ್ಚೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ರವರ ಹಾಸ್ಯ ಗಾರಿಕೆ ನಡೆಯಲಿರುವುದು. 

ನಂತರ ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಳಿದ್ದು ಮುಖ್ಯ ಅತಿಥಿಗಳಾಗಿ, ಮಂಗಳೂರ್ ಸಂಸದರಾದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್,ಹೆಬ್ಬೆವ್ ಫಾರ್ಮ್ಸ್ ಪೆನ್ ಕೊಡ ತೆಲಂಗಾಣದ ಅಶ್ರೀತ್ ಕಿಶನ್, ರೈತ ಸಂಘ ಬೆಂಗಳೂರಿನ ಸಂಚಾಲಕರಾದ ಕೆ ಎಲ್ ಗೋಪಾಲಕೃಷ್ಣ, ನಟೇಶ್ ಪೂಜಾರಿ ಉದ್ಯಮಿ ಬೆಂಗಳೂರು, ಹರೀಶ್ ಶೆಟ್ಟಿ

ಉದ್ಯಮಿ ಮುಂಬೈ, ನಂದಾವರ ದೇವಸ್ಥಾನದ ವ್ಯವಸ್ಥೆಪನ ಸಮಿತಿಯ ಮಾಜಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ , ಅಶೋಕ್ ಕರ್ಕೇರ ಉದ್ಯಮಿ ಬೊಂಬಾಯಿ, ಪ್ರವೀಣ್ ಕಕ್ಕೇರ, ವಿಜಯಕುಮಾರ್ ಕೊಡಿಯಾಲಬೈಲ್,,ವಿದ್ಯಾಧರ ಪೂಜಾರಿ ಕಡೇಶಿವಾಲಯ, ವಸಂತ ಪೂಜಾರಿ, ತಾರಾನಾಥ ಸಾಲಿಯನ್ ಮೊದಲಾದವರು ಉಪಸ್ಥಿತರಿರುವರು.

ನಂತರ ಶ್ರೀಮಂತ್ರದೇವತೆಗೆ ದೊಂದಿ ಬೆಳಕಿನಲ್ಲಿ ವೈಭವದ ಕೋಲೋತ್ಸವ ಜರಗಲಿರುವುದು. ಫೆ 11 ರಂದು ಬೆಳಿಗ್ಗೆ ಶ್ರೀ ಕೃಷ್ಣ ಭಜನ ಮಂದಿರ ಅಮ್ಮ್ಟೂರ್, ಪಾಂಚಜನ್ಯ ಹರಿ ಕೀರ್ತನ ಸಂಕೀರ್ತನೆ ಬಂಟ್ವಾಳ, ಶ್ರೀ ಉಳ್ಳಾತಿ ಬಾಲ ಭಜನಾ ಮಂಡಳಿ ಬೊಂಡಲ, ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಕೊಡಿಕಲ್ ಇವರಿಂದ ಭಜನಾ ಸಂಕೇತನ ಕಾರ್ಯಕ್ರಮ ನಡೆಯಲಿದ್ದು,ಶ್ರೀ ಶಾರದಾ ಅಂದರ ಗೀತಾ ಗಾಯನ ಸಂಘ ಶೃಂಗೇರಿ ಇವರಿಂದ ಭಕ್ತಿ ಗಾಯನ ನಡೆಯಲಿದ್ದು ನಂತರ ಸ್ವಾಮಿ ಕೊರಗಜ್ಜ ಹಾಗೂ ಶ್ರೀ ಗುಳಿಗ ದೈವದ ಕೋಲೊತ್ಸವ ಜರಗಲಿರುವುದು ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment