ಫರಂಗಿಪೇಟೆ ಫರಂಗಿಪೇಟೆ :ಶ್ರೀ ಆಂಜನೇಯ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ, ಪೂಜ್ಯ ಈಶಪ್ರಿಯ ತೀರ್ಥ ಶ್ರೀಗಳಿಂದ ಆಂಜನೇಯ ಹಾಗೂ ಗಣಪತಿ ದೇವರ ಪ್ರತಿಷ್ಠಾಪನೆ.

Coastal Bulletin
ಫರಂಗಿಪೇಟೆ ಫರಂಗಿಪೇಟೆ :ಶ್ರೀ ಆಂಜನೇಯ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮ, ಪೂಜ್ಯ ಈಶಪ್ರಿಯ ತೀರ್ಥ ಶ್ರೀಗಳಿಂದ ಆಂಜನೇಯ ಹಾಗೂ ಗಣಪತಿ ದೇವರ ಪ್ರತಿಷ್ಠಾಪನೆ.

ಬಂಟ್ವಾಳ : ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ನೂತನವಾಗಿ ಏಳೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇವಸ್ಥಾನ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯ ಮತ್ತು ಗಣಪತಿ ದೇವರ ಪ್ರತಿಷ್ಠೆಯನ್ನು ಜ.25ರಂದು ಗುರುವಾರ ಬೆಳಿಗ್ಗೆ ಅದಮಾರು ಮಠದ ಪರಮಮೂಜ್ಯ ಈಶಪ್ರಿಯ ತೀರ್ಥ ಶ್ರೀಪಾದಂಗಳವರು ಪ್ರತಿಷ್ಠಾಪನೆ ನೆರವೇರಿಸಿದರು.

ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಅದಮಾರು ಮಠದ ಪರಮಪೂಜ್ಯ ಈಶಪ್ರಿಯ ಶ್ರೀಪಾದಂಗಳವರು ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.


ಸಭಾಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ. ರವೀಶ್ ತುಂಗಾ ಮಂಗಳೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ, ಯಕ್ಷಗಾನ ಅಭ್ಯಾಸ ಕೇಂದ್ರ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಆಗಮಿಸಿದ್ದರು.

ವೇದಿಕೆಯಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ದೇವಸ್ಥಾನದ ನಿರ್ಮಾಣ ಸಮಿತಿ ಗೌರವಾದ್ಯಕ್ಷ

ಐತಪ್ಪ ಆಳ್ವ ಸುಜೀರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕಾರ್ಯಾಧ್ಯಕ್ಷ ಸದಾನಂದ ಆಳ್ವ ಕಂಪ, ಪ್ರಧಾನ ಸಂಚಾಲಕ ಪ್ರಕಾಶ್‌ಚಂದ್ರ ರೈ ದೇವಸ್ಯ ಉಪಸ್ಥಿತರಿದ್ದರು.

ಎಚ್ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾದ್ಯಕ್ಷ ದಾಮೋದರ ನೆತ್ತರಕೆರೆ ಸ್ವಾಗತಿಸಿ,ಅನಿಲ್ ಪಂಡಿತ್ ಧನ್ಯವಾದವಿತ್ತರು.

ಕ್ಷೇತ್ರದಲ್ಲಿ ಜೀವಕಲಶಾಭಿಷೇಕ, ಪ್ರತಿಷ್ಠಾ ಬಲಿ, ಪವಮಾನ ಹೋಮ, ಬ್ರಹ್ಮಕಲಶ ಮಂಡಲ ರಚನೆ ನಡೆಯಿತು. ಸಾಂಸ್ಕೃತಿಕ ವೇದಿಕೆಯಲ್ಲಿ ಬ್ರಹ್ಮರಕೂಟ್ಲು ಶ್ರೀ ದುರ್ಗಪರಮೇಶ್ವರಿ ಭಜನಾ ಮಂದಿರ ಇವರಿಂದ ಭಜನೆ ಮತ್ತು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ ನಡೆಯಿತು. ಕಳ್ಳಿಗೆ ಗ್ರಾಮಸ್ಥರಿಂದ ಸಾಂಸ್ಕೃತಿಕ ವೈವಿಧ್ಯ, ಶ್ರೀಶ ಭಟ್ ಮುದರಂಗಡಿ ಇವರಿಂದ ಧಾರ್ಮಿಕ ಉಪನ್ಯಾಸ, ಮೈಸೂರು ರಾಮಚಂದ್ರಾಚಾರ್ಯ ಇವರಿಂದ ನಾಮ ಸಂಕೀರ್ತನೆ ನಡೆಯಿತು. ರಾತ್ರಿ ಐಸಿರಿ ಕಲಾವಿದೆರ್ ಮಂಜೇಶ್ವರ ಇದರ ಸದಸ್ಯರಿಂದ ಕಲ್ಚಿಗದ ಮಾಯ್ಕಾರೆ ಪಂಜುರ್ಲಿ ನಾಟಕ ನೆರವೇರಿತು.

Leave a Comment