ಉಪ್ಪಳ: ಇಂದು ಕೊಂಡೆವೂರು ಸದ್ಗುರು ಶ್ರೀ.ನಿತ್ಯಾನಂದ ವಿದ್ಯಾಪೀಠದ ಶಾಲೆಗೆ ಬಸ್ ಅನ್ನು ಮುಂಬಯಿಯ ಹೇರಂಬ ಇಂಡಸ್ಟ್ರೀಸ್‌ನ ಸಿಎಂಡಿ ಆಗಿರುವ ಸದಾಶಿವ ಶೆಟ್ಟಿ.ಕುಳೂರು ಕನ್ಯಾನ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುರಾಮ ಶೆಟ್ಟಿಯವರು ಕೊಡುಗೆಯಾಗಿ ನೀಡಿದರು.
ಶಾಲೆಯ ಅಧ್ಯಕ್ಷರಾದ ಶ್ರೀ.ಶ್ರೀ.ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದಾನಿಗಳನ್ನು ಸನ್ಮಾನಿಸಿ, ಅವರ ಕುಟುಂಬದವರನ್ನು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದಾನಿಗಳ ಕುಟುಂಬದವರು,
ಆಶ್ರಮದ ಭಕ್ತರು ಹಾಗೂ ಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ.ರಾಮಚಂದ್ರ ಚೆರುಗೋಳಿ ಅತಿಥಿಗಳನ್ನು ಮತ್ತು ಅಭ್ಯಾಗತರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.















