ಪುಣಚ : ಪರವಾನಿಗೆ ರಹಿತ ದನದ ಫಾರ್ಮ್ ನಿರ್ಮಾಣ ಆರೋಪ. ಹಿಂ ಜಾ ವೇ ವಿಟ್ಲ ದಿಂದ ಪಿ ಡಿ ಓ ಗೆ ಆಕ್ಷೇಪನಾ ಮನವಿ ಪತ್ರ ಸಲ್ಲಿಕೆ.

Coastal Bulletin
ಪುಣಚ : ಪರವಾನಿಗೆ ರಹಿತ ದನದ ಫಾರ್ಮ್ ನಿರ್ಮಾಣ ಆರೋಪ. ಹಿಂ ಜಾ ವೇ ವಿಟ್ಲ ದಿಂದ ಪಿ ಡಿ ಓ ಗೆ ಆಕ್ಷೇಪನಾ ಮನವಿ ಪತ್ರ ಸಲ್ಲಿಕೆ.

ಬಂಟ್ವಾಳ :ಪುಣಚ ಪಂಚಾಯತ್ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಅನ್ಯಮತೀಯ ವ್ಯಕ್ತಿಯೊಬ್ಬನ ದನದ ಫಾರ್ಮ್ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಪಂಚಾಯತ್ ಆಡಳಿತ ಸಮೀತಿ ತಮ್ಮ ಕಾನೂನು ಮೂಲಕ ನಿರ್ನಾಮ ಮಾಡಬೇಕು ಹಾಗೂ ಪರವಾನಗಿ ಇಲ್ಲದೆ ಕಟ್ಟಡ ಕಟ್ಟುತ್ತಿರುವ ಮಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಆಕ್ಷೇಪನಾ ಮನವಿ ಪತ್ರ ಪುಣಚ ಪಂಚಾಯತ್ ಆಡಳಿತ ಸಮೀತಿ ಹಾಗೂ ಪಿ ಡಿ ಓ ಗೆ ಸಮರ್ಪಸಲಾಯಿತು.

ಒಂದು ವೇಳೆ ಅಲ್ಲಿ ದನದ ಫಾರ್ಮ್ ನಿರ್ಮಾಣ ಪೂರ್ತಿ ಗೊಂಡರೆ ಕೇವಲ 100 ಮೀಟರ್ ಒಳಗೆ ಕೇರಳ ಗಡಿ ಪ್ರದೇಶಕ್ಕೆ ಅಕ್ರಮ ಒಳ ರಸ್ತೆ ಇದ್ದು ಇದರ ಮೂಲಕ ಗೋಸಾಗಾಟ ವ್ಯಾಪಕವಾಗುವ ಸಾಧ್ಯತೆ ಹೆಚ್ಚಿದ್ದು, ಇದರ ವಿರುದ್ಧ ತಕ್ಷಣ ಕ್ರಮ ಕೈಗೊಲ್ಲದೆ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಯಿತು.

ಈ ಸಂಧರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment