ತುಂಬೆ :ಪ್ರಕೃತಿ ಸಂಜೀವಿನಿ ಘಟಕದಲ್ಲಿ ಬಟ್ಟೆ ಚೀಲ ಘಟಕದ ಪ್ರಾರಂಭೋತ್ಸವ. ತುಂಬೆ ಗ್ರಾಮ ಪ್ಲಾಸ್ಟಿಕ್ ಮುಕ್ತ ಘೋಷಣೆ, ಬಟ್ಟೆ ಕೈ ಚೀಲ ಬಳಕೆ ಆಂದೋಲನ.

Coastal Bulletin
ತುಂಬೆ :ಪ್ರಕೃತಿ ಸಂಜೀವಿನಿ ಘಟಕದಲ್ಲಿ ಬಟ್ಟೆ ಚೀಲ ಘಟಕದ ಪ್ರಾರಂಭೋತ್ಸವ. ತುಂಬೆ ಗ್ರಾಮ ಪ್ಲಾಸ್ಟಿಕ್ ಮುಕ್ತ ಘೋಷಣೆ, ಬಟ್ಟೆ ಕೈ ಚೀಲ ಬಳಕೆ ಆಂದೋಲನ.

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರವೀಣ್ .ಬಿ.ತುಂಬೆ ಇವರ ನೇತ್ರತ್ವದಲ್ಲಿ ತುಂಬೆ ಗ್ರಾಮ ಪಂಚಾಯತ್ ನ ಎನ್ ಆರ್ .ಏಲ್ .ಎಂ ಸಂಜೀವಿನಿ ಘಟಕದಲ್ಲಿ ಬಟ್ಟೆ ಚೀಲ ಘಟಕದ ಪ್ರಾರಂಭೋತ್ಸವ ಡಿ.02ರಂದು ಶುಕ್ರವಾರ ಬೆಳಗೆ 9.30 ಕ್ಕೆ ನಡೆಯಿತು.

ತುಂಬೆ ಗ್ರಾಮ ಪಂಚಾಯತ್ ನ ಅಧೀನದಲ್ಲಿ ಕಾರ್ಯ ನಿರ್ವಾಹಿಸುತ್ತಿರುವ ಪ್ರಕೃತಿ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಉದ್ಯೋಗ ಕಲ್ಪಿಸಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು (ಮಹಿಳಾ ಸಭಾಲೀಕರಣ) ಅವಕಾಶ ಕಲ್ಪಸಿ ಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ಭಾರತಿ ಶ್ರೀಧರ್ ರಾವ್ ತುಗುರು, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಂ.ಅಧ್ಯಕ್ಷರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿ,ಮಹಿಳೆಯರು ಸ್ವಾವಲಂಭಿಯಾಗಿ ಬದುಕಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಪಂ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ಮತನಾಡಿ, ಮಹಿಳಾ ಸ್ವಾವಲಂಬನೆಯನ್ನು ಮುಂದಿಟ್ಟುಕೊಂಡು, ಮಾಲಿನ್ಯ ನಿಯಂತ್ರಣ ,ಪರಿಸರ ಪ್ರಜ್ಞೆಯ ಜಾಗೃತಿಯನ್ನು ಪ್ರತಿ ಮನೆಗೂ ತಲುಪಿಸುವುದರ ಮೂಲಕ  ಪಂಚಾಯತ್ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದರು.

ಈ ಅಭಿಯಾನ “ಭೂಮಿ ನಮ್ಮ ಸ್ವತ್ತಲ್ಲ,ನಾವು ಭೂಮಿಯ ಸ್ವತ್ತು’ ಎಂಬ ಘೋಷ ವಾಕ್ಯದೊಂದಿಗೆ ಪ್ಲಾಸ್ಠಿಕ್ ತ್ಯಜಿಸಿ ಪ್ರಕೃತಿ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ  ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿರುತ್ತಾರೆ.

ಈ ಯೋಜನೆಗೆ ಅಂದಾಜು 3ಲಕ್ಷದ ವರೆಗೆ ಆರ್ಥಿಕ ಕ್ರೂಡಿಕರಣವಾಗಬೇಕಿದ್ದು,  ಜಾಹಿರಾತುಗಳಿಂದ ಹಾಗೂ ದಾನಿಗಳ ಹೆಚ್ಚಿನ ಸಹಕಾರವನ್ನು ನಿರಿಕ್ಷಿಸಲಾಗಿದೆ. ತುಂಬೆ ಮೊಹಿದ್ದಿನ್ ರ ರೂ 1 ಲಕ್ಷ  ಅನುದಾನದೊಂದಿಗೆ ಇದೀಗ ಒಟ್ಟು ರೂ 2 ಲಕ್ಷದವರೆಗೆ ಜಾಹಿರಾತು ದೊರಕಿರುವುದು ಈ ಯೋಜನೆಗೆ ಆನೆ ಬಲ ಬಂದಾಂತಾಗಿದೆ ಎಂದರು.

ಮಾಜಿ ಅಧ್ಯಕ್ಷರಾದ ಮಹಮ್ಮದ್ ವಳವೂರು ಪ್ಲಾಸ್ಠಿಕ್ ಬಳಸುವುದರ ಅನಾಹುತದ ಬಗ್ಗೆ ಜಾಗೃತಿ ಮೂಡಿಸಿದರು.ಪಂಚಾಯತ್ ಅಬಿವೃದ್ದಿ ಅದಿಕಾರಿ ಚಂದ್ರಾವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಉಪಾಧ್ಯಾಕ್ಷರಾದ ಜಯಂತಿ ಕೇಶವ ,ಎನ್ ಆರ್ .ಏಲ್ .ಎಂ ನ ಎಂ .ಬಿ .ಕೆ ಯಾದ  ಶಶಿಕಲಾ ಉದಯ್ ಕುಮಾರ್ ,ಪ್ರಕೃತಿ ಸಂಜೀವಿನಿ ಒಕ್ಕೂಟದ ಅದ್ಯಕ್ಷಾರದ  ದಿವ್ಯ ಹರೀಶ್ ಶೆಟ್ಟಿ ,ಪಂಚಾಯತ್ ಸದಸ್ಯರಾದ ಗಣೇಶ್ ಸಾಲ್ಯಾನ್, ಇಬ್ರಾಹಿಂ ವಳವೂರು, ಜಯಂತಿ ಶ್ರೀದರ, ಜಯಂತಿ ನಾಗೇಶ ,ಅತಿಕಬಾನು ಏಲ್ಸಿ ಆರ್ ಪಿ ನ  ಮಾಲತಿ ಉಪಸ್ಥಿತರಿದ್ದರು.

ಭಾಗ್ಯೋದಯ ಮಿತ್ರಕಲಾವೃಂದದ ಅಧ್ಯಕ್ಷರು ಹಾಗೂ ಸಂಗಮ್ ಟೈಲರಿಂಗ್ ಮಾಲಕರಾದ ಯಾದೇಶ್ ಸಾಲ್ಯನ್ ,ಗೋಪಾಲ ಕೃಷ್ಣ ಟೈಲರ್ ಒಕ್ಕೂಟದ ಸದಸ್ಯರಿಗೆ ಬಟ್ಟೆ ಚೀಲ ತಯಾರಿ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದರು. ಶಶಿಕಲಾ ಮನೋಹರ ಕೊಟ್ಟಾರಿ ಸ್ವಾಗತಿಸಿದರು. ವಿದ್ಯಾ ರಾಮಲ್ ಕಟ್ಟೆ ವಂದಸಿದರು.

Leave a Comment