ಬಂಟ್ವಾಳ: ಹಿಂದು ಜಾಗರಣ ವೇದಿಕೆ, ಇದರ ಆಶ್ರಯದಲ್ಲಿ ಡಿ.6ರ ಮಂಗಳವಾರ ಬೆಳಗ್ಗೆ ಗಂಟೆ 10-00ರಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿರುವುದು.
ಮಧ್ಯಾಹ್ನ ಗಂಟೆ 11-00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು,ಅಧ್ಯಕ್ಷತೆಯನ್ನು ಖ್ಯಾತ ಜ್ಯೋತಿಷ್ಯರಾದ ವೆಂಕಟ್ರಮಣ ಮುಚ್ಚಿನ್ನಯ ಕಾರಿಂಜ ವಹಿಸಲಿದ್ದು, ಶ್ರೀ ಶ್ರೀ ಪರಮಪೂಜ್ಯ ರಾಜಶೇಖರಾನಂದ ಸ್ವಾಮೀಜಿ,ಶ್ರೀ ವಜ್ರದೇಹಿ ಮಠ, ಗುರುಪುರ, ಗೌರವಾಧ್ಯಕ್ಷರು, ಹಿಂ,ಜಾ,ವೇ, ಕರ್ನಾಟಕ ರಾಜ್ಯ ಇವರು ಆಶೀರ್ವಾಚನ ನೀಡಲಿದ್ದಾರೆ.
ಹಿಂ.ಜಾ.ವೇ ದಕ್ಷಿಣ ಕರ್ನಾಟಕ ಪ್ರಾಂತ ಸಂಚಾಲಕರಾದ ದೋ. ಕೇಶವ ಮೂರ್ತಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.