ಬಂಟ್ವಾಳ, ಡಿ. 30: ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರ ಲೋಕ ಸೇವಾಬಂಧು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಿ.ಸಿ.ರೋಡ್‌ನಲ್ಲಿ ನಡೆಯಲಿರುವ 16 ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ 30 ದಿನಗಳ ಅಮ್ಯೂಸ್ ಮೆಂಟ್ ಪಾರ್ಕ್ ಒಳಗೊಂಡ ಕರಾವಳಿ ಕಲೋತ್ಸವ 2023-24 ಶನಿವಾರ ಅದ್ದೂರಿಯ ಮೆರವಣಿಗೆಯ ಮೂಲಕ ಚಾಲನೆ ನೀಡಲಾಯಿತು.
ಬಿ.ಸಿ.ರೋಡ್‌ನ ಪೊಲೀಸ್‌ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯ ಗೋಲ್ಡನ್ ಪಾರ್ಕ್ ಮೈದಾನದವರೆಗೆ ತೆರೆದ ವಾಹನದಲ್ಲಿ ಚಿಣ್ಣರ ಅಧ್ಯಕ್ಷೆ ಶ್ರೀನಿಧಿ ಬಿ.ಸಿ.ರೋಡ್ ಸೇರಿದಂತೆ ಗಣ್ಯರ ಮೆರವಣಿಗೆ ನೆರವೇರಿತು.
ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮೆರವಣಿಗೆಗೆ ಚಾಲನೆ ನೀಡಿದರು. ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಸಂಚಾಲಕ ಮೋಹನದಾಸ ಕೊಟ್ಟಾರಿ, ಉಪಾಧ್ಯಕ್ಷೆ ಫೌಝಿಯಾ, ಮೊಡಂಕಾಪು ಶಾಲಾ ಮುಖ್ಯಶಿಕ್ಷಕ ಫಾ।
ದೀಪಕ್ ಲಿಯೋ ಡೇಸ, ಪ್ರಮುಖರಾದ ಇಬ್ರಾಹಿಂ ಕೈಲಾರ್, ರಾಜ ಚಂಡ್ತಿಮಾರ್, ದೇವಪ್ಪ ಕುಲಾಲ್ ಪಂಜಿಕಲ್ಲು, ವಿಶ್ವನಾಥ ಕೊಟ್ಟಾರಿ, ಶೋಭಾ ಶೆಟ್ಟಿ ಸ್ವಜೇಶ್‌ಕುಮಾರ್, ಪುರುಷೋತ್ತಮ ಕೊಟ್ಟಾರಿ ಉಪಸ್ಥಿತರಿದ್ದರು.
ನಾಸಿಕ್ ಬ್ಯಾಂಡ್, ಗೊಂಬೆ ಕುಣಿತ, ಹುಲಿ ವೇಷಧಾರಿ ಮಕ್ಕಳು, ಕಲಶ ಹಿಡಿದ ಮಹಿಳೆಯರು, ಕೇರಳದ ಚೆಂಡೆ, ಎನ್‌ಸಿಸಿ ವಿದ್ಯಾರ್ಥಿಗಳು ಪಥಸಂಚಲನ, ಕುಣಿತ ಭಜನೆ ಮೊದಲಾದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.














