ಬಿಸಿರೋಡ್ : ಅಂತರ ವಲಯ ರೋಟರಿ ಕುಟುಂಬ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ.

Coastal Bulletin
ಬಿಸಿರೋಡ್ : ಅಂತರ ವಲಯ ರೋಟರಿ ಕುಟುಂಬ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ.

ಬಂಟ್ವಾಳ :ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಹಾಗೂ ರೋಟರಿ ಕ್ಲಬ್ ಹುಣಸೂರು ಇದರ ಜಂಟಿ ಆಶ್ರಯದಲ್ಲಿ ಅಂತರ ವಲಯ ರೋಟರಿ ಸಮ್ಮಿಲನ ಕಾರ್ಯಕ್ರಮವು ಡಿ.30ರಂದು ಶನಿವಾರ ಬಿ ಸಿ ರೋಡ್ ರೋಟರಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿಯ ಅಧ್ಯಕ್ಷರಾದ ರೋ ಪಿ ಹೆಚ್ ಎಫ್ ಗಣೇಶ ಶೆಟ್ಟಿ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ರೋಟರಿ ಕ್ಲಬ್ ಹುಣಸೂರು ಇದರ ಅಧ್ಯಕ್ಷ ಚೆನ್ನಕೇಶವ, ತುಳುನಾಡ ಮಾಣಿಕ್ಯ ನಟ ಅರವಿಂದ ಬೋಳಾರ್, ರೋ ಲೋರೆನ್ಸ್ ಗೊನ್ಸಲಿಸ್, ರೋ ರಾಘವೇಂದ್ರ ಭಟ್, ರೋ ರವೀಂದ್ರ ದರ್ಬೆ, ರೋ ಬಸವರಾಜ್, ಸ್ಥಾಪಕಧ್ಯಕ್ಷ ರೋ ಸತೀಶ ಕುಮಾರ್ ಕೆ, ರೋ ಆರ್ ಪದ್ಮನಾಭ ರೈ, ರೋ ಪ್ರಸನ್ನ ಉಪಸ್ಥಿತರಿದ್ದರು.

ನಿಯೋಜಿತ ಅಧ್ಯಕ್ಷ ಟಿ ಶೇಷಪ್ಪ ಮಾಸ್ಟರ್ ನೂತನ ಪದಾಧಿಕಾರಿಗಳ ತಂಡವನ್ನು ಸಭೆಗೆ ಪರಿಚಯಿಸಿದರು. ಈ

ಸಂದರ್ಭದಲ್ಲಿ ತುಳುನಾಡ ಮಾಣಿಕ್ಯ ನಟ ಅರವಿಂದ ಬೋಳಾರ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು, ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ರೋಶನಿ ತಾರಾ ಡಿ ಸೋಜಾ, ವಿದ್ಯಾ ಮನೋಜ್,ರಾಘವೇಂಡ ಹೊಳ್ಳ ಕಲ್ಲಡ್ಕ,ವಿಶ್ವನಾಥ ಪೂಜಾರಿ, ಮಹಾಬಲ ದಾಸಕೊಡಿ ಇವರನ್ನು ಗುರುತಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.

ಕುಟುಂಬ ಸಮ್ಮಿಲನದ ಬಗ್ಗೆ ಸಂಪನ್ಮೂಲಗಳ ವ್ಯಕ್ತಿ ಉಪನ್ಯಾಸಕ ನಾಗರಾಜ್ ಮೈಸೂರ್ ಉಪನ್ಯಾಸ ನೀಡಿದರು.ರೋಟರಿ ಪದಾಧಿಕಾರಿಗಳಿಗೆ ನಡೆದ ವಿವಿಧ ಸ್ಪರ್ಧೆಯ ಬಹುಮಾನ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ರೋ ಮಧುಸೂಧನ ಶೆಣೈ ಧನ್ಯವಾದವಿತ್ತು ರೋ ಸುಪ್ರಿಯಾ ರಮೇಶ್ ಹಾಗೂ ರೋ ಪ್ರಥ್ವಿರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Comment