ಬಂಟ್ವಾಳ : ಅಡಕೆ ಬೆಳೆಗಾರರ ಕುರಿತು ಗೃಹ ಸಚಿವರ ಹೇಳಿಕೆ ಖಂಡಿಸಲು ಸಾಧ್ಯವಾಗದ ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.
ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಬಿ.ಸಿ.ರೋಡಿನ ಫ್ಲೈಓವರ್ ಸಮೀಪ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಡಕೆ ಬೆಳೆಗಾರರ ಪರವಾಗಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಲವು ಅನುಕೂಲಗಳನ್ನು ಮಾಡಲಾಗಿತ್ತು. ಇದೀಗ ಬಿಜೆಪಿ ಸಚಿವರೊಬ್ಬರ ಹೇಳಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಅವರ ಹೇಳಿಕೆಯನ್ನು ಖಂಡಿಸಲು ಸಾಧ್ಯವಾಗದ ಕರಾವಳಿಯ ಎಲ್ಲ ಶಾಸಕರೂ
ರಾಜೀನಾಮೆ ನೀಡಬೇಕು ಎಂದರು.
ಪಕ್ಷದ ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್ , ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮೋಹನ ಗೌಡ ಕಲ್ಮಂಜ ಮತ್ತಿತ್ತರು ಮಾತನಾಡಿದರು.
ಬಂಟ್ವಾಳ ಪುರಸಭಾಧ್ಯಕ್ಷರು ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪಕ್ಷದ ಪ್ರಮುಖರಾದ ಮೋಹನ ಗೌಡ ಕಲ್ಮಂಜ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸೋಮಶೇಖರ ಗೌಡ ಮತ್ತಿತ್ತರು ಉಪಸ್ಥಿತರಿದ್ದರು.














