ಬಂಟ್ವಾಳ :ಶ್ರೀ ರಾಧ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಟ್ರಸ್ಟ್ ಬ್ರಹ್ಮಗಿರಿ, ಗೋವಿನತೋಟ, ಕೊಡ್ಮಾಣ್ ಅಂಚೆ, ಪುದು ಗ್ರಾಮ ಹಾಗೂ ಗೋಸೇವಾ ಗತಿವಿವಿ, ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ : 31-10-2023ನೇ ಮಂಗಳವಾರ ಸಂಜೆ ಗಂಟೆ 5-00ಕ್ಕೆ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.














