ಕೊಳ್ನಾಡು: ತಾಲೂಕು ಮಟ್ಟದ ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

Coastal Bulletin
ಕೊಳ್ನಾಡು: ತಾಲೂಕು ಮಟ್ಟದ ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

ಬಂಟ್ವಾಳ :ಸಾಹಿತ್ಯದಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ . ಪ್ರತಿಯೊಂದು ಮಗುವು ವಿಶೇಷ ಪ್ರತಿಭೆ ಹೊಂದಿರುತ್ತದೆ. ಸಾಹಿತ್ಯವು ಆ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಅಪಾರ ಅವಕಾಶವನ್ನು ಒದಗಿಸುತ್ತದೆ. ಸಾಹಿತ್ಯದಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಸಂಭ್ರಮ ಸಾಕಾರಗೊಳ್ಳುತ್ತದೆ " ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ಇದರ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ರವರು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡುವಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದಿಂದ ನಡೆದ ತಾಲೂಕು ಮಟ್ಟದ 2 ದಿನಗಳ ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳು ಕಲಿಕೆಯ ಜತೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜ ಗುರುತಿಸುವ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ. ಆ ನಿಟ್ಟಿನಲ್ಲಿ ಶಿಬಿರದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು " ಎಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಪ್ರಸಾದ್ ರೈ ತಿರುವಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಸ್ಕರ್ ಅಡ್ವಾಳರು ಸ್ವರಚಿತ ಕವನ ಹಾಗೂ ಕಥೆ ರಚನೆ , ರಮೇಶ ಬಾಯಾರು ಭಾಷಣ ಕಲೆ, ತುಳಸಿ ಕೈರಂಗಳ ಕಥೆ ರಚನೆ, ಗೋಪಾಲಕೃಷ್ಣ ನೇರಳಕಟ್ಟೆ ಕವನ ರಚನೆ , ಶ್ರೀಕಲಾ ಕಾರಂತ

ಅಳಿಕೆ ಬಾಲ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಗುತ್ತಿಗೆದಾರರಾದ ಗಣೇಶ ಪ್ರಭು ಮೋಂತಿಮಾರು , ಗೌರವ ಸಲಹೆಗಾರರಾದ ಬಾಲಕೃಷ್ಣ ಕಾರಂತ್ ಎರುಂಬು ,ಶಾಲಾ ಮುಖ್ಯೋಪಾಧ್ಯಾಯ ಸುಶೀಲಾ ವಿಟ್ಲ , ಸಾಹಿತಿಗಳಾದ ಭಾಸ್ಕರ್ ಅಡ್ವಾಳ ಹಾಗೂ ರಮೇಶ್ ಬಾಯಾರು , " ಪರಿಷತ್ತಿನ ವಲಯ ಸಂಯೋಜಕರಾದ ರಾಧಾಕೃಷ್ಣ ಮೂಲ್ಯ ಅಮ್ಟೂರು , ಸಾಹಿತಿ ತುಳಸಿ ಕೈರಂಗಳ್ ಉಪಸ್ಥಿತರಿದ್ದರು. 

 ಶಿಬಿರ ಸಂಯೋಜಕ ಕಲಾವಿದ ಶ್ರೀ ತಾರಾನಾಥ್ ಕೈರಂಗಳ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು.

Leave a Comment