ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೋರ್ಸುಗಳಿಗೆ ಎನ್. ಬಿ. ಎ ಮರು ಮಾನ್ಯತೆ.

Coastal Bulletin
ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೋರ್ಸುಗಳಿಗೆ ಎನ್. ಬಿ. ಎ ಮರು ಮಾನ್ಯತೆ.

ಬಂಟ್ವಾಳ:ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಮೂರು ಇಂಜಿನಿಯರಿಂಗ್ ಪದವಿ ಕೋರ್ಸುಗಳಿಗೆ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (ಎನ್. ಬಿ. ಎ )ಮರು ಮಾನ್ಯತೆ ಲಭಿಸಿದೆ.

ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಇನ್ಫಾರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪದವಿ ಕೋರ್ಸುಗಳು ಮತ್ತೆ ಮೂರು ವರ್ಷಗಳ ಅವಧಿಗೆ ಮರು ಮಾನ್ಯತೆ ಪಡೆದಿವೆ. ಕಳೆದ ಆರು ವರ್ಷಗಳಿಂದ ಈ ಕೋರ್ಸುಗಳು ಎನ್. ಬಿ. ಎ ಮಾನ್ಯತೆ ಹೊಂದಿದ್ದವು. ಇದೀಗ ಮರು ಮಾನ್ಯತೆ 2025ರ ಜುಲೈ 1ರಿಂದ ಅನ್ವಯವಾಗಲಿದೆ. 

ಗುಣಮಟ್ಟದ ತಾಂತ್ರಿಕ ಶಿಕ್ಷಣ, ಫಲಿತಾಂಶ ಆಧಾರಿತ ಕಲಿಕೆ, ಜಾಗತಿಕ ಶೈಕ್ಷಣಿಕ ಗುಣಮಟ್ಟ ಗಳಿಗೆ ಒತ್ತು ನೀಡುತ್ತಿರುವ ಕಾಲೇಜಿನ

ಸಾಧನೆಗೆ ಈ ಮರು ಮಾನ್ಯತೆಯಿಂದ ಮತ್ತೊಂದು ಗರಿ ಮೂಡಿ ದಂತಾಗಿದೆ.ಇದರಿಂದಾಗಿ ಸಾಮಾಜಿಕ ಜವಾಬ್ದಾರಿ ಮತ್ತು ಕೈಗಾರಿಕಾ ಸ್ನೇಹಿ ತಾಂತ್ರಿಕ ಶಿಕ್ಷಣ ಪದವೀಧರರನ್ನು ಸಮಾಜಕ್ಕೆ ನೀಡುವ ಕಾಲೇಜಿನ ಬದ್ಧತೆಗೆ ಇನ್ನಷ್ಟು ಬಲ ಬಂದಂತಾಗಿದೆ.

ಕಾಲೇಜಿನ ಈ ಸಾಧನೆಗಾಗಿ ಪ್ರಾಂಶುಪಾಲ ಡಾ.ನಾಗೇಶ್ ಹೆಚ್. ಆರ್. ಸಹಿತ ಬೋಧಕ ಮತ್ತು ಬೋಧಕೇತರರ ಬಳಗವನ್ನು ಆಡಳಿತ ಮಂಡಳಿಯ ಪರವಾಗಿ ಕಾಲೇಜಿನ ಸಂಚಾಲಕ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅಭಿನಂದಿಸಿದ್ದಾರೆ.

Leave a Comment