ಬಂಟ್ವಾಳ :ಸುದೀರ್ಘ 25 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆಯನ್ನುಗೈದಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆತ್ತರ ಕೆರೆಯ ಶಿಕ್ಷಕಿ ಶ್ರೀಮತಿ ಲೀನಾ ಡಿಸೋಜ ರವರು ಇಂದು ವಯೋನಿವೃತ್ತಿಯನ್ನು ಹೊಂದುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ) ಬೆಂಗಳೂರು. ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ನೆತ್ತರಕೆರೆ ಶಾಲೆಯಲ್ಲಿ ನಡೆಸಲಾಯಿತು
ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ತಿದ್ದಿತೀಡುವಲ್ಲಿ ವೃತ್ತಿಯನ್ನು ಸೇವೆಯಾಗಿ ಕಳೆದ ನಿವೃತ್ತ ಶಿಕ್ಷಕಿ ಶ್ರೀಮತಿ .ಲೀನ ಡಿಸೋಜಾರವರನ್ನು ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ್, ಉಪಾಧ್ಯಕ್ಷರಾದ ಶ್ರೀಮತಿ ಭಾರತಿ, ಕಾರ್ಯದರ್ಶಿಯಾದ ಶ್ರೀ ಯತೀಶ್, ಜೊತೆ ಕಾರ್ಯದರ್ಶಿಯಾದ ಶ್ರೀ. ಪುಟ್ಟ ರಂಗನಾಥ್. ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋದ, ಸದಸ್ಯೆ ಶ್ರೀಮತಿ ರೇಷ್ಮಾ ಸತೀಶ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ
ಶ್ರೀ ದಾಮೋದರ್ ನೆತ್ತರಕೆರೆ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಭಾಸ್ಕರ್ ಎನ್, ಶಾಲಾ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ರಾವ್, ಪುದು ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್, ಶಾಲಾ ಮುಖ್ಯಶಿಕ್ಷಕಿಯಾದ ಶ್ರೀಮತಿಗುಣರತ್ನ ,ಸಹಶಿಕ್ಷರು, ಅಂಗನವಾಡಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಅನಿತಾರವರು ನಿವೃತ್ತ ಶಿಕ್ಷಕಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯಶಿಕ್ಷಕರು ಸ್ವಾಗತಿಸಿ,ಶಿಕ್ಷಕಿ ಶ್ರೀಮತಿ ಜೆಸಿಂತಾ ವಂದಿಸಿ,ಶ್ರೀಮತಿ.ಮೋಹಿನಿ ನಿರೂಪಿಸಿದರು.ಶಿಕ್ಷಕರಾದ ಶ್ರೀಮತಿ ಅನಿತಾ, ಶ್ರೀಮತಿ.ನಿಶಾ,ಹಾಗೂ ಕುಮಾರಿ.ಸುಮಲತಾ ಸಹಕರಿಸಿದರು.
















