ಬಂಟ್ವಾಳ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ. ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ " ಜಲಜೀವನ್ ಮಿಷನ್ " ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚೆನೈತೋಡಿ ಗ್ರಾಮ ಪಂಚಾಯತ್ ನಲ್ಲಿ ಮಳೆ ನೀರು ಕೊಯ್ಲು ಹಾಗೂ ಬೂದು ನೀರಿನ ನಿರ್ವಹಣೆ ಬಗ್ಗೆ ತರಬೇತಿ ಯನ್ನು ಆ 29ರಂದು ಆಯೋಜಿಸಲಾಗಿತ್ತು.
ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಯ ಸಿಬ್ಬಂದಿ ಯವರಾದ ಗುಣವತಿ ಹಾಗೂ ವಿಲ್ಮಾ ರವರು ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ನೀರು ಮತ್ತು ನೈರ್ಮಲ್ಯ ಇಲಾಖೆ ಯ ಇಂಜಿನಿಯರ್ ಕ್ರಷ್ಣ ರವರು ಬೂದು ನೀರಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ತರಬೇತಿ ಕಾರ್ಯಕ್ರಮ ದಲ್ಲಿ ನೀರು ಮತ್ತು ನೈರ್ಮಲ್ಯ
ಸಮಿತಿ ಸದಸ್ಯರು, ಸ್ವ ಸಹಾಯ ಸಂಘ ದ ಸದಸ್ಯರು, ಗ್ರಾಮಸ್ಥರು ಸೇರಿ ದಂತೆ ಒಟ್ಟು 50 ಮಂದಿ ಸದಸ್ಯರು ಭಾಗವಹಿಸಿ ತರಬೇತಿ ಯ ಪ್ರಯೋಜನ ಪಡೆದರು. ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ( ISRA) ಗ್ರಾಮ್ಸ್ ಮಂಗಳೂರು ಇದರ ಸಮುದಾಯ ಸಂಘಟಕರಾದ ಗುಣವತಿ, ವಿಲ್ಮಾ ಹಾಗೂ ಚಂದ್ರಶೇಖರ್ ತರಬೇತಿಯನ್ನು ಆಯೋಜಿಸಿ , ಯಶಸ್ವಿಗೊಳಿಸಿದರು.














