ಬಂಟ್ವಾಳ :ಇಲ್ಲಿನ ನವೋದಯ ಮಿತ್ರ ಕಲಾವೃಂದ ರಿ. ನೇತ್ರಾವತಿ ಮಾತೃಮಂಡಲಿ ಹಾಗೂ ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಅಶ್ರಯದಲ್ಲಿ ರಾಮಕೃಷ್ಣ ತಪೋವನ ಪೊಳಲಿ ಇದರ ಹಸಿರು ಕ್ರಾಂತಿ ಯೋಜನೆಯಡಿ ಹಡೀಲು ಬಿದ್ದ ಗದ್ದೆಯಲ್ಲಿ ಕೃಷಿ ಮಾಡುವ ಸಲುವಾಗಿ ಸಾಮೂಹಿಕ ನೇಜಿ ನೆಡುವ ಕಾರ್ಯಕ್ಕೆ ಆ 28ರಂದು ಭಾನುವಾರ ಚಾಲನೆ ನೀಡಲಾಯಿತು.
4ನೇ ವರ್ಷದ ಹಸಿರು ಕ್ರಾಂತಿಯ ಕೃಷಿ ಕಾರ್ಯದಲ್ಲಿ ರಾಮಕೃಷ್ಣ ತಪೋವನದ ವಿದ್ಯಾರ್ಥಿಗಳು ಸೇರಿದಂತೆ,ಸಂಘದ ಸದಸ್ಯರು ಹಾಗೂ ಮಾತ್ರ ಮಂಡಳಿಯ ಸದಸ್ಯರು
ಹಾಗೂ ಊರಿನ ಹಿರಿಯರು ಕಿರಿಯರು ಸೇರಿ ಸುಮಾರು 70 ಕ್ಕಿಂತಲೂ ಅಧಿಕ ಜನರು ಬೆಳಗ್ಗೆ ಯಿಂದ ಮಧ್ಯಾಹ್ನ ದ ತನಕ ಉತ್ಸಾಹದಿಂದ ಭಾಗಿಯಾಗಿದ್ದರು.














