ವಿಟ್ಲ : ಪೆರುವಾಯಿ ಗ್ರಾಮದ ಕಡೆಂಗೋಡ್ಲು ದಾರಿಯಿಂದ ಕೇರಳದ ಕಸಾಯಿಖಾನೆಗೆ ಪಿಕಪ್ ನಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆಗೆ ಪೆರುವಾಯಿ ವಿ.ಹಿಂ.ಪ.ಬಜರಂಗದಳ ಬಂದು, ಗೋವುವನ್ನು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.
ಮೇವಿಗೆ ಗುಡ್ಡಕ್ಕೆ ಹೋಗಿದ್ದ ಗೋವುವನ್ನು ಕೇರಳದ ಕಸಾಯಿಖಾನೆಗೆ ಕರೆದುಕೊಂಡು ಹೋಗುವ ವೇಳೆಗೆ ಕಾರ್ಯಕರ್ತರು ತಡೆದು ನಿಲ್ಲಿಸಿದರು. ಅದೇ ಹೊತ್ತಿಗೆ ಪೆರುವಾಯಿ ಗ್ರಾಮದ ಅಬ್ದಲ್
ರಜಾಕ್ ಯಾನೆ ಪುತ್ತು ಬ್ಯಾರಿ ಬದಿಯಾರು ಹಾಗೂ ಆತನ ಅಣ್ಣ ಮಹಮ್ಮದ್ ಶರಿಫ್ ಇಬ್ಬರು ಪರಾರಿಯಾಗಿದ್ದಾರೆ.
ಈ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.














