ತುಂಬೆ: ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿ ಸಂಘದ ಕ್ರೀಡಾಕೂಟದ ಸಮಾರೋಪ. ಸುಮಾರು 300 ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗಿ.

Coastal Bulletin
ತುಂಬೆ: ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿ ಸಂಘದ ಕ್ರೀಡಾಕೂಟದ ಸಮಾರೋಪ. ಸುಮಾರು 300 ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗಿ.

ಬಂಟ್ವಾಳ :ತುಂಬೆಯ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಇತ್ತೀಚೆಗೆ ತುಂಬೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು.

ವಾಲಿಬಾಲ್, 100 ಮೀಟರ್ ಓಟ, ಶಾಟ್‌ಪುಟ್, ಮ್ಯೂಸಿಕಲ್ ಚೆಯರ್, ತ್ರೋಬಾಲ್, ಕ್ರಿಕೆಟ್ ಇತ್ಯಾದಿ ಆಕರ್ಷಕ ಕ್ರೀಡೆ ಆಟಗಳಲ್ಲಿ ಸುಮಾರು 300ರಷ್ಟು ರಕ್ಷಕ-ಶಿಕ್ಷಕ ಹಾಗೂ ಹಳೇ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪಿ.ಟಿ.ಎ. ವತಿಯಿಂದ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಅಳ್ವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತುಂಬೆ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರವೀಣ್ ಬಿ ತುಂಬೆ, ಎಂಆರ್‌ಪಿಎಲ್‌ನ ನಿವೃತ್ತ ಮ್ಯಾನೇಜ‌ರ್ ಸದಾಶಿವ ಡಿ. ತುಂಬೆ, ತುಂಬೆ ಗ್ರಾ ಪಂ ಸದಸ್ಯ

ಅಝೀಝ್ ಟಿ, ತುಂಬೆ ಉದ್ಯಮಿ ಇಯ್ತಿಯಾಝ್ ಅಲ್ಪಾ ಹಾಗೂ ಶ್ರೀಶೈಲ ಪ್ರಕಾಶ್ ಬಿ. ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ತುಂಬೆ ವಿದ್ಯಾಸಂಸ್ಥೆಗಳ ಮ್ಯಾನೇಜರ್ ಅಬ್ದುಲ್ ಕಬೀರ್ ಬಿ., ಪಿ.ಇ.ಟಿ. ಮೋಲಿ ಎಡ್ನಾ ಗೊನ್ಸಾಲ್ವಸ್, ಉಪನ್ಯಾಸಕ ವಿ. ಎಸ್. ಭಟ್, ಪಿ.ಟಿ.ಎ. ಕ್ರೀಡಾ ಕಾರ್ಯದರ್ಶಿ ಗಫೂ‌ರ್ ಮತ್ತಿತ್ತರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ. ಬಿ., ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್ ವಂದಿಸಿದರು.

Leave a Comment