ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಪೆಟ್ರೋಲ್, ಡೀಸೆಲ್ ದರ 8-10 ರೂ. ಕಡಿತ...?

Coastal Bulletin
ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಪೆಟ್ರೋಲ್, ಡೀಸೆಲ್ ದರ 8-10 ರೂ. ಕಡಿತ...?

ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಪ್ರತೀ ಲೀಟರ್‌ಗೆ 8 ರಿಂದ 10 ರೂ.ಗಳಷ್ಟು ಕಡಿತಗೊಳಿಸುವ ಸಾಧ್ಯತೆಗಳಿದೆ ಎಂದು ಇಂಗ್ಲಿಷ್‌ ವೆಬ್‌ಸೈಟ್‌ಗಳು ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವಾಸಿಗಳಿಗೆ ಬಂಪರ್ ಕೊಡುಗೆ ನೀಡಲು ಸಜ್ಜುಗೊಂಡಿದೆ. ಮೂಲಗಳ ಪ್ರಕಾರ ಈಗಾಗಲೇ ಇಂಧನ ಸಚಿವಾಲಯ ಈ ಸಂಬಂಧಿಸಿದಂತೆ

ಪ್ರಸ್ತಾವನೆಯನ್ನೂ ಸಿದ್ದಪಡಿಸಿದ್ದು, ಪ್ರಧಾನಿ ಅವರ ಅನುಮೋದನೆಗಾಗಿ ಕಾಯುತ್ತಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿ ರುವುದು ಈ ನಿರ್ಣಯಕ್ಕೆ ಕಾರಣ ಎನ್ನಲಾಗಿದೆ.

Leave a Comment