ಮಂಗಳೂರು :ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ 2024.

Coastal Bulletin
ಮಂಗಳೂರು :ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ 2024.

ಮಂಗಳೂರು :ಅಖಿಲ ಭಾರತ ಮುಂಡಾಲ ಯುವ ವೇದಿಕೆಯು ಸಮುದಾಯದ ಸಂಘಟನೆಗಾಗಿ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು , ಈದೀಗ 15ನೇ ವರ್ಷದ ಮುಂಡಾಲ ಸಮಾಜ ಬಾಂಧವರ ಗ್ರಾಮೀಣ ಕ್ರೀಡಾ ಕೂಟವು ನ.24ರಂದು ಆದಿತ್ಯವಾರ ಕರಾವಳಿ ಉತ್ಸವ ಮೈದಾನದಲ್ಲಿ ಮಹಿಳೆಯರಿಗೆ ಪುರುಷರಿಗೆ ಮಕ್ಕಳಿಗೆ ವಿವಿಧ ಆಟೋಟಗಳು ನಡೆಯಿತು.

ಕ್ರೀಡಾಕೂಟವನ್ನು ಉರ್ವ ಠಾಣೆಯ ಪೋಲೀಸು ನಿರೀಕ್ಷಕರಾದ ಹರೀಶ್ ಕುಮಾರ್ ಎಚ್. ವಿ. ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ರಾಷ್ಟ್ರೀಯ ಕ್ರೀಡಾಪಟು ಮುಂಡಾಲ ಸಮಾಜದ ಬಂಧು ಸುಧಾಕರ್ ಮುಲ್ಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.    

ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷರಾದ ರವಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಗುರುಪ್ರಕಾಶ್ ಮಾಲಕರು ದಿಯಾ ಆರ್ಥ್ ಮೂವರ್ಸ್ , ರೋಹಿಣಿ ಕಲ್ಲಾವು ನಿವೃತ್ತರು ಆರೋಗ್ಯ ಇಲಾಖೆ ಮಂಗಳೂರು ಮಹಾನಗರ ಪಾಲಿಕೆ,

ಸೀತರಾಮ ಮುಲ್ಲಕಾಡ್ ಎಸ್. ಬಿ. ಐ, ಸುಮನ್ ಬೆಂಗರೆ ಸದಸ್ಯರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಸುಜಾತ ಪ್ರಕಾಶ್ ಎಸ್.ಡಿ ಸಿ ಸಿ ಬ್ಯಾಂಕ್ , ಕೃಪಾ ಮನೋಜ್ ಯೂನಿಯನ್ ಬ್ಯಾಂಕ್ , ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ಸಂಚಾಲಕಿ ಚೈತ್ರ ಮುಲ್ಲ ಕಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸ್ಥಾಪಕ ಅಧ್ಯಕ್ಷರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ನಿಶಾಂತ್ ಉರ್ವ ವಂದಿಸಿದರು. ಮಾಜಿ ಅಧ್ಯಕ್ಷರಾದ ರಘುವೀರ್ ಬಾಬುಗುಡ್ಡ ಕಾರ್ಯಕ್ರಮ ನಿರೂಪಿಸಿದರು. 

ಸಮಾಜ ಬಾಂದವರು ವೇದಿಕೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು

Leave a Comment