Coastal Bulletin

ಬಂಟ್ವಾಳ :ಇಲ್ಲಿನ ಪುದು ಗ್ರಾಮದ ಗೋವಿನತೋಟ ಎಂಬಲ್ಲಿ ಶ್ರೀ ರಾಧಸುರಭಿ ಗೋಮಂದಿರದಲ್ಲಿ ಪಿತೃಪಕ್ಷ ಮಾಸದ ಈ ಸಂಧರ್ಬದಲ್ಲಿ ಭಗವಾನ್ ಗೋಪಾಲನ ಮತ್ತು ಗೋಮಾತೆಯ ಮಡಿಲಲ್ಲಿ ಮಾಲಯ ಅಮವಾಸ್ಯೆಯ ಸೆ.25ರಂದು ಆದಿತ್ಯವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಪಿತೃಗಳಿಗೆ ಕೃತಜ್ಞತೆಯ ನ್ನು ಸಲ್ಲಿಸಲು ವಿಶೇಷ ಸಂಕೀರ್ತನ ಯಜ್ಞ ಮತ್ತು ಭಗವದ್ಗೀತೆ ಶ್ಲೋಕ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಿತೃಗಳ ಋಣ ತೀರಿಸಲು ಪ್ರಯತ್ನಿಸಿದರೆ,  ಸಂತೃಪ್ತರಾದ ಪಿತೃಗಳು ನಮ್ಮನ್ನ ಆಶೀರ್ವದಿಸಿದಾಗ ನಮ್ಮ ಏಳಿಗೆ ಯಾಗುತ್ತದೆ ಅಂತ ನಮ್ಮ ಶಾಸ್ತ್ರ ಹೇಳುತ್ತೆ ಆದ್ದರಿಂದ ಭಕ್ತರ ಸಂಘದಲ್ಲಿ ಪಿತೃಗಳನ್ನು ತೃಪ್ತಿಪಡಿಸಲು ಇದೊಂದು ಸದವಕಾಶವಾಗಿದೆ  ಎಂದು  ಮಂಗಳೂರಿನ ಶೋಭ ಮಯ್ಯ ಮಾತಾಜಿಯವರು ಪಿತೃಪಕ್ಷದ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ

ಸಂಸ್ಕಾರ ಭಾರತಿ ಯ ಜಿಲ್ಲಾಧ್ಯಕ್ಷ ತಾರಾನಾಥ್ ಕೊಟ್ಟಾರಿ , ರಾಧಾ ಸುರಭಿ ಗೋಶಾಲೆಯ ಅಧ್ಯಕ್ಷರಾದ ಭಕ್ತಿ ಭೂಷಣ್ ದಾಸರು, ಕಳ್ಳಿಗೆ ಪಂಚಾಯತ್  ಉಪಾಧ್ಯಕ್ಷರಾದ ದಾಮೋದರ ನೆತ್ತರಕೆರೆ ,ಭಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ  ಭರತ್ ಕುಂಭ್ಡೇಲು , ನವೀನ ಮರ್ಲ ಕೊಡಂಗೆ , ಮತ್ತಿತರರು ಉಪಸ್ಥಿತರಿದ್ದರು.

Leave a Comment