ಬಂಟ್ವಾಳ :ಗ್ರಾಮ ಪಂಚಾಯತ್ ನಿಂದ ದಿಲ್ಲಿವರೆಗೆ ನಿರಂತರವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಕಾರ್ಯಕರ್ತರ ಶ್ರಮವೇ ಕಾರಣ, ಕಾರ್ಯಕರ್ತರ ಶ್ರಮ ವ್ಯರ್ಥವಾಗದ ರೀತಿಯಲ್ಲಿ ಚಿಂತನೆಗೆ ಶಕ್ತಿ ತುಂಬಿ ಅಭಿವೃದ್ಧಿ ಕಾರ್ಯದ ಜೊತೆ ಗೌರವಯುತ ಬದುಕನ್ನು ನೀಡುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ.ರಾಷ್ಟ್ರದ ಚಿಂತನೆಯ ದೃಷ್ಟಿಯಿಂದ , ದೇಶದ ಸೇವೆಗಾಗಿ ಬಿಜೆಪಿ ಪಕ್ಷ ಸದೃಡವಾಗಬೇಕು ಎಂದು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.















