Coastal Bulletin

ಮಂಗಳೂರು : ತುಳುನಾಡಿನ ಪ್ರಸಿದ್ಧ ಕಾರಣೀಕ ಕ್ಷೇತ್ರವಾಗಿರುವ ಶ್ರೀ ಪಣೋಲಿಬೈಲು ಕ್ಷೇತ್ರದಲ್ಲಿ ಅಗೆಲು ಸೇವೆಗಳು ಪುನರಾರಂಭಗೊಳ್ಳಲಿದ್ದು, ಆಗಸ್ಟ್ 1ರಂದು ಅಗೆಲು ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಈ ಹಿಂದೆ ಕೊರೋನಾ ಲಾಕ್ ಡೌನ್ ಜಾರಿಯಾದ ಸಂದರ್ಭ ಕ್ಷೇತ್ರದಲ್ಲಿ ಅಗೆಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.


ಇದೀಗ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿಯಂತೆ ವಾರದ ಮೂರು ದಿನಗಳ ಕಾಲ ಸೇವೆ ಆರಂಭಗೊಳ್ಳಲಿದೆ. ಮಂಗಳವಾರ, ಶುಕ್ರವಾರ, ಭಾನುವಾರಗಳಂದು ಅಗೆಲು ಸೇವೆ ನಡೆಯಲಿದೆ.

Leave a Comment