ಬಂಟ್ವಾಳ: ತಾಲೂಕಿನ ಪುದು ಪಂಚಾಯತ್ ಹಾಗೂ ಅಡ್ಯಾರ್ ಪಂಚಾಯತ್ ಸಹಯೋಗದಲ್ಲಿ ರಾಷ್ಟ್ರಿಯ ಹೆದ್ದಾರಿ 73ರ ಫರಂಗಿಪೇಟೆಯಿಂದ ಕಡೆಗೋಳಿವರೆಗೆ ಸ್ವಚ್ಚತಾ ಅಭಿಯಾನವು ಜೂ.29ರಂದು ಭಾನುವಾರ ನಡೆಯಿತು.
ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು ಹಾಗೂ ಅಗ್ನೇಸ್ ಕಾಲೇಜ್ ನ ಎನ್ ಎಸ್ ಎಸ್ ವಿದ್ಯಾರ್ಥಿಗಳು,
ಪುದು ಪಂಚಾಯತ್ ಪಿ ಡಿ ಒ, ಅಧ್ಯಕ್ಷರು ಸಿಬ್ಬಂದಿ ವರ್ಗ,,ಹಸಿರು ದಳ ಸಿಬ್ಬಂದಿಗಳು, ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದ್ದರು.















