ಬಂಟ್ವಾಳ :ಸಜಿಪಮುನ್ನೂರು ಮುದೆಲ್‌ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಅನ್ನಛತ್ರದ ಶಿಲಾ ಪಲಕವನ್ನು. ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಉದ್ಘಾಟನೆ ಮಾಡಿ ಅನ್ನ ಛತ್ರವನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು. ದೀಪ ಪ್ರಜ್ವಲನೆಯನ್ನು. ಗಡಿ ಪ್ರದಾನರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿ ರಮಾನಾಥ ರೈ, ಸಂತೋಷ್ ಜಿ ಶೆಟ್ಟಿ ದಲಂದಿಲ, ಎ ,ಸಿ, ಭಂಡಾರಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜೀಪ ಮುನ್ನೂರು ಮಾಗಣೆಯ ಪರಾರಿಗುತ್ತು ಗಡಿ ಪ್ರಧಾನರಾದ ಮಂಜುನಾಥ ರೈ, ಗಂಗಾಧರ್ ಭಂಡಾರಿ ಆಳ್ವರಪಾಲು ,ಹಾಗೂ ಸೂರ್ಯನಾರಾಯಣ ತಂತ್ರಿಗಳು, ಸಜೀಪಮಾಗಣೆಯ ತಂತ್ರಿಗಳು ಸುಬ್ರಮಣ್ಯ ಭಟ್ ,
ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಇಂಜಿನಿಯರ್ ನಾಗೇಶ್ ಕುಲಾಲ್ ಮಾನಿಮಜಲ್, ಗುತ್ತಿಗೆ ದಾರರಾದ ಸತೀಶ್ ಗಟ್ಟಿ ಆಲಾಡಿ, ಇವರನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮವನ್ನು ಶೇಷಪ್ಪ ಮಾಸ್ಟರ್ ನಿರೂಪಿಸಿ ಸುಕುಮಾರ್ ಬಂಟ್ವಾಳ್ ಸ್ವಾಗತಿಸಿ ಶ್ರಿ ಎನ್. ಕೆ ಶಿವ ಧನ್ಯವಾದವಿತ್ತರು.














