ಬಂಟ್ವಾಳ :ಶ್ರೀ ಜೈ ಹನುಮಾನ್ ಮಂದಿರ ಶ್ರೀರಾಮಭಕ್ತ ಆಂಜನೇಯ ಸೇವಾ ಟ್ರಸ್ಟ್(ರಿ.) ಇದರ ಅಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಆಲಯದಲ್ಲಿ ಎ 30 ಹಾಗೂ ಮೇ 1ರಂದು ಶ್ರೀ ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀ ವೇದಮೂರ್ತಿ ಸುಜೀರು ಶ್ರೀ ಗಣೇಶ್ ಭಟ್ ಇವರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಹನುಮಾನ್ ನಗರ ಪೊಡಿಕಲ ಕಂಬ್ಳದಲ್ಲಿ ಜರುಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














