ಮಾರ್ನಬೈಲು: ಅಯ್ಯಪ್ಪ ಮಂದಿರದಲ್ಲಿ 5ನೇ ಪಂಚಾರತಿ ಸೇವೆ.

Coastal Bulletin
ಮಾರ್ನಬೈಲು: ಅಯ್ಯಪ್ಪ ಮಂದಿರದಲ್ಲಿ 5ನೇ ಪಂಚಾರತಿ ಸೇವೆ.

ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಹಾಗೂ ಸಂಕಲ್ಪ ಸಿದ್ಧಿಗಾಗಿ 18 ಗುರುವಾರಗಳ ಪರ್ಯಂತ ನಡೆಯುವ ವಿಶೇಷ ಪಂಚಾರತಿ ಸೇವೆಯ ಐದನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.

ಅಭ್ಯಾಗತರಾಗಿ ಉದ್ಯಮಿ ಬಿ. ಯೋಗೀಶ್ ನಾಯಕ್,ಸುಪ್ರೀತ್ ಶೆಟ್ಟಿ, ಹರಿಯಪ್ಪ ಮೂಲ್ಯ, ಉದಯ ಕುಮಾರ್ ನಾಯಕ್ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮಾನಂದ ನೂಜಿಪ್ಪಾಡಿ ಶ್ರೀ ಅಯ್ಯಪ್ಪ ದೇವರಿಗೆ ಪಂಚಾರತಿ ಬೆಳಗಿದರು.

ಈ ಸಂದರ್ಭ ಶಿಕ್ಷಕ ರಮಾನಂದ ನೂಜಿಪ್ಪಾಡಿ ಮಾತನಾಡಿ ಶ್ರೀ ಅಯ್ಯಪ್ಪ ಮಂದಿರ ಈ ಭಾಗದ ಜನರ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ. ಮಂದಿರದ ಅಭಿವೃದ್ಧಿಯ ದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಮಾರ್ನಬೈಲು ಪ್ರಸ್ತಾವನೆಗೈದರು.

ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಶಬರಿ ಮಾತೃ

ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಪದಾಧಿಕಾರಿಗಳಾದ ಗಣೇಶ್ ಗುಡ್ಡೆಯಂಗಡಿ, ನಾಗೇಶ್ ಕುಲಾಲ್ ಕೋಮಾಲಿ, ಯೋಗೀಶ್ ಗಟ್ಟಿ ನಂದಾವರ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ದಯಾನಂದ ಬಿ.ಎಂ. ಕಂದೂರು, ಸುಧೀರ್ ನಾಯಕ್ ನಂದಾವರ, ಸತೀಶ್ ಗೌಡ ನಂದಾವರ, ಗಣೇಶ್ ದೇವಾಡಿಗ ದಾಸರಗುಡ್ಡೆ, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ವಸಂತ್ ಕೊಲ್ಲುಕೋಡಿ, ಅವಿನಾಶ್ ಗಟ್ಟಿ ಮಾರ್ನಬೈಲು, ರಕ್ಷಿತಾ ರಂಜಿತ್, ಪ್ರಮೀಳಾ ಗಣೇಶ್, ಶಕುಂತಲಾ ಅಶೋಕ್ ಗಟ್ಟಿ, ಸರಸ್ವತಿ ಎಂ. ನಾಯ್ಕ್ ಖಂಡಿಗ, ನಿತಿನ್ ಕುಮಾರ್, ಸಂತೋಷ್ ಆಚಾರ್ಯ, ದೀಪ್ತೇಶ್ ಮೆಲ್ಕಾರ್, ಲಕ್ಷ್ಮಣ ಗಟ್ಟಿ ನಂದಾವರ, ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ ಸಜೀಪ, ಸುಧೀರ್ ನಾಯ್ಕ್, ಮಾಧವ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು

Leave a Comment