ಬಂಟ್ವಾಳ: ಮಂಗಳೂರಿನ ಪಡೀಲಿನ ಕಟ್ಟಡವೊಂದರಲ್ಲಿಕೆಲಸದಲ್ಲಿ ನಿರತನಾಗಿದ್ದ ಬಂಟ್ವಾಳ ತಾ.ನ ಅಜಿಲಮೊಗರು ಪುಣ್ಕೆದಡಿ ನಿವಾಸಿ 4 ನೇಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಪರಿಸರದಲ್ಲಿಸ್ಮಶಾನ ಮೌನ ಅವರಿಸಿದೆ. ಅಜಿಲಮೊಗರು ಪುಣ್ಕೆದಡಿಯ ವಿಮಲ ಗುರುವ ಮುಗೇರ ಅವರ ಪುತ್ರ ವಿಜಯ್ ಮೃತಪಟ್ಟ ದುರ್ದೈವಿ.
ಕ್ರಿಯಾಶೀಲ ವ್ಯಕ್ತಿತ್ವದ ವಿಜಯ್ ಕಾಲೇಜು ಶಿಕ್ಷಣವನ್ನು ಪೂರೈಸಿ, ಮನೆಗೆ ಆಧಾರಸ್ತಂಭವಾಗಿದ್ದ ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತನು ಆಗಿದ್ದು, ಸ್ವಂತ ಉದ್ಯೋಗವನ್ನು ನಡೆಸಿ ತನ್ನ ಕುಟುಂಬವನ್ನು ಸಾಕುವ ಕನಸು ಕಂಡಿದ್ದ ಆದರೆ ಅದೆಲ್ಲವು ನುಚ್ಚುನೂರಾಗಿದೆ.
ಮಂಗಳೂರಿನ ಪಡೀಲಿನಲ್ಲಿ ಕಟ್ಟಡವೊಂದರ 4 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದ ವಿಜಯ್ ಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅತನನ್ನು ಪರೀಕ್ಷಿಸಿದ
ವೈದ್ಯರು ಅದಾಗಲೇ ಮೃತಪಟ್ಟಿರುವುದನ್ನು ಧೃಢಪಡಿಸಿದ್ದಾರೆ. ವಿಜಯ್ ಆಕಸ್ಮಿಕ ಸಾವು ಬಡ ಕುಟುಂಬಕ್ಕೆ ಬರಸಿಡಿಲು ಅಪ್ಪಳಿಸಿದಂತಾಗಿದೆ
ಅಕ್ಕನ ವಿವಾಹ, ವೃದ್ಧ ತಂದೆ,ತಾಯಿಯನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿದ್ದ ವಿಜಯ್ ತನ್ನ ಬಾಳಿನಲ್ಲಿ ಅನೇಕ ಕನಸನ್ನು ಹೊತ್ತಿದ್ದ,ಆದರೆ ವಿಧಿಯ ಲೀಲೆ ಬೇರೆನೆ ಆಗಿದ್ದು,ಕುಟುಂಬದ ಆಧಾರಸ್ತಂಭವೇ ಇಲ್ಲದಂತಾಗಿರುವುದು ಕುಟುಂಬ ಅನಾಥ ವಾದಂತಾಗಿದೆ..ಮೃತ ವಿಜಯ್ ತಂದೆ, ತಾಯಿ, ಅಕ್ಕ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.














