ಮುಂಬಯ : ಕುಲಾಲ ಸಂಘ ಮುಂಬಯಿ ಯುವ ವಿಭಾಗದ ವತಿಯಿಂದ ಕ್ರೀಡೋತ್ಸವ ವು ಪೆ. 25 ರಂದು ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿ ಪನ್ವೆಲ್, ಸೆಕ್ಟರ್ -16 ಕಾಲ್ ಶೇಖರ್ ಕಾಲೇಜ್ ನ ಹತ್ತಿರ ಇಲ್ಲಿ , ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಮತ್ತು ಗೌ .ಅಧ್ಯಕ್ಷರಾದ ದೇವದಾಸ್ ಎಲ್ ಕುಲಾಲ್ ಇವರ ಉಪಸ್ಥಿತಿಯಲ್ಲಿ ದಿನಪೂರ್ತಿ ನಡೆಯಿತು,
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ, ಪನ್ವೆಲ್ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಜಿ ಶೆಟ್ಟಿ ಕ್ರೀಡೆಯಲ್ಲಿ ಬಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕುಲಾಲ ಸಮಾಜ ನನಗೆ ಬಹಳ ಹತ್ತಿರವಾದ ಸಮಾಜ, ನನ್ನ ಊರಿನ ಸುತ್ತು ಮುತ್ತ ಇರುವ ಹೆಚ್ಚಿನವರು ಕುಲಾಲರು. ಈ ಸಮಾಜ ಬಾಂದವರೊಂದಿಗೆ ನಾನು ನನ್ನ ಶಾಲಾ ಜೀವನವನ್ನು ನಡೆಸಿದ್ದೆ. ಕೊರೋನಾ ಸಮಯದಲ್ಲಿ ಮಾತ್ರವಲ್ಲ ಇತ್ತೀಚೆಗೆ ವ್ಯಕ್ತಿಯೋರ್ವರು ಅಪಘಾತದಿಂದ ಮಡಿದಿದ್ದು ಆ ವ್ಯಕ್ತಿ ಯಾವುದೇ ಸಂಘಟನೆಯಲ್ಲಿಲ್ಲದ ಕಾರಣ ಇಲ್ಲಿ ಯಾರಿಗೂ ತಿಳೆಯದೇ ಇದ್ದು ಊರಿನಿಂದ ನನಗೆ ಪೋನಿನ ಮೂಲಕ ತಿಳಿದುಬಂದಿದ್ದು ನಾನು ಅದಕ್ಕೆ ಸರಿಯಾದ ವ್ಯವಸ್ತೆಯನ್ನು ಮಾಡಿದ್ದೆ. ಆದುದರಿಂದ ಸಮಾಜ ಬಾಂದವರು ಸಮಾಜ ಸಂಘಟನೆಯಲ್ಲಿದ್ದಲ್ಲಿ ಒಬ್ಬರಿಗೊಬ್ಬರು ಪರಿಚಿತರಾಗುತ್ತಾರೆ ಹಾಗೂ ಕಷ್ಟದ ಸಂದರ್ಭದಲ್ಲಿ ಅಗತ್ಯಕ್ಕೆ ಬರುತ್ತಾರೆ ಎನ್ನುತ್ತಾ ಇಂತಹ ಕ್ರೀಡೋತ್ಸವದಲ್ಲಿ ಸಮಾಜ ಬಾಂದವರು ಒಟ್ಟಿಗೆ ಇದ್ದು ಮಾತುಕತೆ ನಡೆಸುವ ಅವಕಾಶ ಸಿಗುತ್ತದೆ. ಇದರಿಂದ ಸಮಾಜ ಬಾಂಧವರು ಬಹಳ ಹತ್ತಿರಕ್ಕೆ ಬರುವಂತಾಗುತ್ತದೆ. ಕ್ರೀಡೋತ್ಸವದಲ್ಲಿ ಬಾಗವಹಿಸಿದ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆಗಳು ಎಂದರು.
ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಇಂತಹ ಕ್ರೀಡೊತ್ಸವ ಪ್ರತೀವರ್ಷ ನಡೆಯಲಿ ಎಲ್ಲರೂ ಕ್ರೀಡೊತ್ಸವದಲ್ಲಿ ಬಾಗವಹಿಸುವಂತಾಗಲಿ. ಎಲ್ಲಾ ಸ್ಥಳೀಯ ಕಾರ್ಯಾಧ್ಯಕ್ಷರು ಸೇರಿ
ಇನ್ನೂ ಉತ್ತಮ ರೀತಿಯಲ್ಲಿ ಕ್ರೀಡೋತ್ಸವ ನಡೆಯಲಿ ಎನ್ನುತ್ತಾ ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ಮಹೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ನ ಮಾಲಕ ಜಗದೀಶ್ ಆರ್ ಬಂಜನ್, ಉಪಾಧ್ಯಕ್ಷರು ಡಿ ಐ ಮೂಲ್ಯ ,ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್, ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯ ಧ್ಯಕ್ಷ ಸಂಜೀವ ಬಂಗೇರ , ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಲಕ್ಷಣ್ ಸಿ. ಮೂಲ್ಯ, , ವಾಸು ಎಸ್ ಬಂಗೇರ, ಸಂಜೀವ ಬಂಗೇರ, ಉಪಸ್ತರಿದ್ದರು
ಕ್ರೀಡಾ ಉತ್ಸವ ಆಯೋಜಿಸನ ವಲ್ಲಿ ಶ್ರಮಿಸಿದ ಸಂಘದ ವಿವಿಧ ಸ್ಥಳೀಯ ಸಮಿತಿಯ ಯುವ ವಿಭಾಗದ ಪ್ರಸಾದ್ ಮೂಲ್ಯ,ದೀಕ್ಷಿತ್ ಕುಲಾಲ್,ಯುವ ಕ್ರೀಡಾ ಸಂಘಟಕರುದ ಸೂರಜ್ ಕುಲಾಲ್, ಬಿನಿತ್ ಸಾಲಿಯಾನ್, ವೇಣುಗೋಪಾಲ ಕರ್ಕೇರ, ವಿನಯ ಎಸ್. ತೇಜೇಶ್ ಮೂಲ್ಯ,ರೋಶನ್ ಬಂಗೇರ, ಅಕ್ಷತ್ ಮೂಲ್ಯ, ದೀಕ್ಷಾ ಮೂಲ್ಯ, ಗುರುಪ್ರಸಾದ್ ಮೂಲ್ಯ, ಚೇತನ್ ಬಂಗೇರ , ಅಮಿತ ಬಂಗೇರ,ಭಾಗ್ಯ ಬಂಗೇರ, ನಿಶಿತಾ ಬಂಗೇರ,ನವ್ಯಾ ಮೂಲ್ಯ,ಮೇಘಾ ಬಂಜನ್ ವೇದಿಕೆ ಗಣ್ಯರು ಗೌರವಿಸಿದ್ದರು
ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ನಿರೂಪಿಸಿದರು, ಎಲ್. ಅರ್, ಮೂಲ್ಯ ಅತಿಥಿಗಳನ್ನು ಪರಿಚಯಿಸಿದರು. ಕ್ರೀಡೋತ್ಸವ ಯಶಸ್ಸಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.










