ಬಂಟ್ವಾಳ :ಕಳೆದ ೪ ವರ್ಷಗಳ ಅತ್ಯಂತ ಕಡಿಮೆ ಅವಧಿಯಲ್ಲಿ ೪ ಶಾಖೆಗಳನ್ನು ತೆರೆದು ಸಫಲತೆಯನ್ನು ಪಡೆದುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ ಎಂದು ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ನುಡಿದರು. ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ ೪ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಉಳ್ಳಾಲ ಪ್ರದೇಶದಲ್ಲಿ ಕೋಮು ಸಾಮರಸ್ಯ ಉತ್ತಮವಾಗಿರುವ ಕಾರಣ ನೂತನ ಶಾಖೆಗೆ ಎಲ್ಲಾ ಸಮುದಾಯಗಳಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಶೀಘ್ರದಲ್ಲೇ ೫ನೇ ಶಾಖೆ ತೆರೆಯಲಿ ಎಂದು ಅವರು ಶುಭ ಹಾರೈಸಿದರು.
ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಮನೋಜ್ ಸಾಲ್ಯಾನ್ ಭದ್ರತಾ ಕೊಠಡಿ ಉದ್ಘಾಟಿಸಿದರು. ಅಖಿಲ ಕರ್ನಾಟಕ ಗಾಣಿಗರ ಸಂಘ ಅಧ್ಯಕ್ಷ ರಾಜಶೇಖರ ಗಾಣಿಗ ಎಂ.ಆರ್. ಭದ್ರತಾ ಕೋಶ ಉದ್ಘಾಟಿಸಿದರು. ಕರಾಸೌಸಂಸನಿ ಬೆಂಗಳೂರು ನಿರ್ದೇಶಕಿ ಭಾರತಿ ಭಟ್ ಗಣಕಯಂತ್ರ ಉದ್ಘಾಟಿಸಿದರು. ಗುರುಪ್ರಸಾದ್ ಬಂಗೇರ ಶಾಖಾಧಿಕಾರಿ ಕೊಠಡಿ ಉದ್ಘಾಟಿಸಿದರು. ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸಂಜೀವ ಅಡ್ಯಾರ್ ಸಭಾಧ್ಯಕ್ಷತೆ ವಹಿಸಿದ್ದರು. ರೆ| ಫಾ.
ಸಿಪ್ರಿಯನ್ ಪಿಂಟೋ ಮಾಸಿಕ ಠೇವಣಿ ಖಾತೆ ಪುಸ್ತಕ ಬಿಡುಗಡೆಗೊಳಿಸಿದರು. ಪ್ರಮುಖರಾದ ಪ್ರಕಾಶ್ ಹೊಸಬೆಟ್ಟು, ಪ್ರೇಮಾನಂದ ಎ, ಪ್ರಧಾನ ವ್ಯವಸ್ಥಾಪಕ ಪ್ರಮೋದ್, ರಘು ಸಪಲ್ಯ, ನಾರಾಯಣ ಕಣ್ಣೂರು, ಹರಿದಾಸ್ ಯು, ಪ್ರವೀಣ್ ಜೆ.ಎಸ್., ಎ. ಮಾಧವ ಸುವರ್ಣ, ಬಿ.ರಾಮ್‌ದಾಸ್, ವೆಂಕಟೇಶ್ ಎಂ., ಪಿ. ಗೋಪಾಲಕೃಷ್ಣ, ಅನಿಲ್‌ಕುಮಾರ್, ಕೆ. ಮೋನಪ್ಪ ಸಪಳಿಗ, ತಿರುಮಲೇಶ್ ಸಪಳಿಗ, ಮೋಹಿನಿ ಎಚ್., ಅನಿತಾ, ಸತ್ಯಪ್ರಭಾ, ಯು.ಬಿ. ವಿಜಯಕುಮಾರ್, ಸೂರಜ್, ಜನಾರ್ಧನ್ ತೊಕ್ಕೊಟ್ಟು, ಸಂಜೀವ ಉಳ್ಳಾಲ, ಮಾಧವ ಉಳ್ಳಾಲ, ಸುನೀತಾ ಜಯಂತ್ ಮತ್ತಿತರರು ಇದ್ದರು. ದೀಪಕ್ ಅಡ್ಯಾರ್ ನಿರೂಪಿಸಿದರು. ಮಹಾಬಲ ಅಡ್ಯಾರ್ ಸ್ವಾಗತಿಸಿದರು. ನಿರ್ದೇಶಕ ಭಾಸ್ಕರ್ ಸಪಳಿಗ ವಂದಿಸಿದರು.














