ಬಂಟ್ವಾಳ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಸಮಯ ಬದುಕಿನ ಬಗ್ಗೆ ನೈಜ ಪಾಠ ಕಲಿಸುವ ಎನ್ ಎಸ್ ಎಸ್ ಶಿಬಿರ ಕೇವಲ ಶ್ರಮದಾನಕ್ಕೆ ಸೀಮಿತವಾಗಿಲ್ಲ ಎಂದು ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಹೇಳಿದ್ದಾರೆ.
ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕ ವತಿಯಿಂದ ಮಂಗಳವಾರ ಸಂಜೆ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಭಾರತಿ ವಸಂತ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಳ ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಶುಭ ಹಾರೈಸಿದರು.
ಗ್ರಾ.ಪಂ.ಸದಸ್ಯರಾದ ಸಂತೋಷ್ ಕುಮಾರ್
ಬೆಟ್ಟು, ದಿನೇಶ ಶೆಟ್ಟಿ ಮಡಂದೂರು, ಜಿ.ಸಂತೋಷ್ ಗೌಡ, ಮಾಜಿ ಅಧ್ಯಕ್ಷರಾದ ದಾಮೋದರ ಬಂಗೇರ, ಹರೀಶ ಆಚಾರ್ಯ, ದೈಹಿಕ ಶಿಕ್ಷಕ ಜನಾರ್ದನ, ಮುಖ್ಯಶಿಕ್ಷಕಿ ಸೌಮ್ಯ ಎಚ್., ಪ್ರಮುಖರಾದ ಜಯರಾಮ ಶೆಟ್ಟಿ ಕೊಯಿಲ, ರಾಜೇಶ ಜೈನ್ ಪಡ್ರಾಯಿ, ಕೆ.ಪರಮೇಶ್ವರ ಪೂಜಾರಿ, ಸದಾನಂದ ಗೌಡ ರಾಯಿ, ಉಪ ಪ್ರಾಂಶುಪಾಲ ಪ್ರದೀಪ್ ಪೂಜಾರಿ, ವಿದ್ಯಾರ್ಥಿ ನಾಯಕ ಸಂಕೇತ್, ನಾಯಕಿ ವೈಢೂರ್ಯ ಮತ್ತಿತರರು ಇದ್ದರು.
ಶಿಬಿರಾಧಿಕಾರಿ ಶಶಿಧರ್ ಎಸ್. ಸ್ವಾಗತಿಸಿ, ಉಪನ್ಯಾಸಕಿ ಗೀತಾ ಯು. ವಂದಿಸಿದರು. ಉಪನ್ಯಾಸಕ ಶಾಂತಪ್ಪ ಮನೋಹರ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.















