Coastal Bulletin

ಉಡುಪಿ: ಗೋಳಿ ಜಾತಿಗೆ ಸೇರಿದ ವಿಶೇಷವಾದ ಮೀನೊಂದು ಮಲ್ಪೆ ಬಂದರಿನ ಹರಾಜಿನಲ್ಲಿ 2 ಲಕ್ಷ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗಿದೆ.

ಉಡುಪಿಯ ಮಲ್ಪೆ ಬಂದರಿನ ಮೀನುಗಾರರು ಆಳ ಸಮುದ್ರದಲ್ಲಿ ಮೀನು ಹಿಡಿಯಲು ಬೋಟ್​ನಲ್ಲಿ ತೆರಳಿದ್ದರು. ಈ ವೇಳೆ ಮೀನುಗಾರರು ಹಾಕಿದ ಬಲೆಗೆ ಗೋಳಿ ಜಾತಿಗೆ ಸೇರಿದ 22 ಕೆ.ಜಿಯ ವಿಶೇಷ ಮೀನು ಬಿದ್ದಿದೆ.

ಬಳಿಕ ಬಂದರಿನ ದಡಕ್ಕೆ ತಂದು ಹರಾಜಿನಲ್ಲಿಟ್ಟಾಗ ಬರೊಬ್ಬರಿ 2,34,080

ರೂಪಾಯಿಗಳಿಗೆ ಗೋಳಿ ಮೀನು ಮಾರಾಟವಾಗಿದೆ. ಇದನ್ನು ಔಷಧಿಗಳಿಗೆ ಬಳಕೆ ಮಾಡಲಾಗುತ್ತದೆ. ಈ ಮೀನಿಗೆ ಸ್ಥಳೀಯವಾಗಿ ಗೋಳಿ ಎನ್ನುತ್ತಾರೆ. ಈ ಮೀನಿನ ವೈಜ್ಞಾನಿಕ ಹೆಸರು ಘೋಲ್ ಫಿಶ್. ಘೋಲ್ ಫಿಶ್‌ನ ವಾಯು ಚೀಲವನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುವುದರಿಂದ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ.

Leave a Comment