ಬಿ.ಸಿ.ರೋಡು: " ಸಮಾಗಮ" ಕುಲಾಲ ಸಂಘ ಸಮ್ಮಿಲನ ಕಾರ್ಯಕ್ರಮ.

Coastal Bulletin
ಬಿ.ಸಿ.ರೋಡು: " ಸಮಾಗಮ" ಕುಲಾಲ ಸಂಘ ಸಮ್ಮಿಲನ ಕಾರ್ಯಕ್ರಮ.

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಪೊಸಳ್ಳಿಯಲ್ಲಿ ಕುಲಾಲ ಸುಧಾರಕ ಸಂಘದ ವತಿಯಿಂದ ಭಾನುವಾರ ನಡೆದ ' ಸಮಾಗಮ" ಕುಲಾಲ ಸಂಘ ಸಮ್ಮಿಲನ ' ಕಾರ್ಯಕ್ರಮಕ್ಕೆ ಬಿ ಎಸ್ ಎನ್ ಎಲ್ ನಿವೃತ್ತ ಎಜಿಎಂ ಕೃಷ್ಣಶ್ಯಾಮ್ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ ಮತ್ತು ಶೈಕ್ಷಣಿಕ ಸಾಧಕಿ ಶಿವಾನಿ ಇವರನ್ನು ಸನ್ಮಾನಿಸಲಾಯಿತು.

ಎಂಜಿನಿಯರ್ ಶಿವಪ್ಪ ಅಲೆತ್ತೂರು, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ನಿವೃತ್ತ ಉಪತಹಶೀಲ್ದಾರ್ ಪದ್ಮನಾಭ ಮಯ್ಯರಬೈಲು, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ

ಮಚ್ಚೇಂದ್ರ, ಸೇವಾದಳಪತಿ ರಾಜೇಶ್ ರಾಯಿ ಇದ್ದರು. 

 ಸಂಯೋಜಕ ಮಚ್ಚೇಂದ್ರ ಸಾಲ್ಯಾನ್ ಸ್ವಾಗತಿಸಿ, ಸಮಿತಿ ಸದಸ್ಯ ದಾಮೋದರ ಏರ್ಯ ವಂದಿಸಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಮತ್ತು ಸಂಘದ ಕಾರ್ಯದರ್ಶಿ ಕೇಶವ ಮಾಸ್ಟರ್ ನಿರೂಪಿಸಿದರು.

Leave a Comment