ಬಂಟ್ವಾಳ : ಸೆ 25ರಂದು ಶ್ರೀರಾಮ ಪದವಿ ಕಾಲೇಜಿನಲ್ಲಿ ಮಾನವಿಕ ಸಂಘದ ವತಿಯಿಂದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಸೆ 25 ರಿಂದ ಸೆ 02ರ ಗಾಂಧಿ ಜಯಂತಿಯವರೆಗೆ ಆಚರಿಸಲಾಗುವ ಸ್ವದೇಶಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ವದೇಶಿ ಸಪ್ತಾಹ ಪರಿಕಲ್ಪನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾನವಿಕ ಸಂಘದ ನಿರ್ದೇಶಕರಾದ ಗಂಧರ್ವ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಕನ್ಯ, ಕಲಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಲಕ್ಷ್ಮಿ , ಸಾಹಿತ್ಯ ಸಂಘದ ನಿರ್ದೇಶಕರಾದ
ಕುಮಾರಿ ಸಂಧ್ಯಾ, ಹಾಗೂ ವಾಣಿಜ್ಯ ಸಂಘದ ನಿರ್ದೇಶಕರಾದ ಹರ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಾನವಿಕ ಸಂಘದ ಅಧ್ಯಕ್ಷರಾದ ಕುಮಾರಿ ಧನ್ಯಶ್ರೀ ದ್ವಿತೀಯ ಬಿ ಎ ನಿರೂಪಿಸಿ, ಕುಮಾರಿ ಪದ್ಮಶ್ರೀ ದ್ವಿತೀಯ ಬಿ ಎ ಸ್ವಾಗತಿಸಿ, ಕುಮಾರಿ ಚೈತನ್ಯ ಪ್ರಥಮ ಬಿ ಎ ಧನ್ಯವಾದ ತಿಳಿಸಿದರು















