ಬಂಟ್ವಾಳ: ಇಲ್ಲಿಯ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಎ.1 ರಿಂದ 3 ರವರೆಗೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎ.1 ರಂದು ಬೆಳಿಗ್ಗೆ ಗಣಹೋಮ,ನಾಗತಂಬಿಲ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 10 ಗಂಟೆಗೆ ಭಂಡಾರ ಏರಿ ಶ್ರೀಅರಸು ದೈವಕ್ಕೆ ನೇಮ ನಡೆಯಲಿದೆ.ಎ.2 ರಂದು ರಾತ್ರಿ
ಜುಮಾದಿ ಬಂಟ ದೈವಗಳಿಗೆ ಹಾಗೂ ಎ.3 ರಂದು ಪ್ರಧಾನ ದೈವ ವೈದ್ಯನಾಥ ದೈವಕ್ಕೆ ನೇಮೋತ್ಸವ ಹಾಗೂ ಕಂಚಿಲಸೇವೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















