ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯ ವೇಳೆ ಹಿಂದೂಯೇತರರಿಗೆ ಅಂಗಡಿ , ಸ್ಟಾಲ್ ಗಳನ್ನು ನಡಸಲು ಅವಕಾಶ ಕೊಡಬಾರದು ಎಂದು ವಿ.ಹಿಂ.ಪ ಮತ್ತು ಬಜರಂಗದಳ ಪ್ರಮುಖರ ನಿಯೋಗ ದೇವಳದ ಕಾರ್ಯ ನಿರ್ವಹಣಾಧಿಕಾರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಕೆಲವೊಂದು ವ್ಯಕ್ತಿಗಳು ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದಲೇ, ದೇವಸ್ಥಾನದ ಗದ್ದೆಯಲ್ಲಿ ವ್ಯಾಪಾರ ನಡೆಸುವ ಹೆಸರಿನಲ್ಲಿ ಪ್ರವೇಶ ಮಾಡಿ ಪಾವಿತ್ರತ್ಯತೆಯನ್ನು ಹಾಳು ಮಾಡುತ್ತಿರುವುದು ಅನೇಕ ವರ್ಷಗಳಿಂದ ಗಮನಕ್ಕೆ ಬಂದಿರುತ್ತದೆ. ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ದೇವರ ಭಕ್ತರಾದ ಹಿಂದೂಗಳು ಬೃಹತ್ ಸಂಖ್ಯೆಯಲ್ಲಿ ಬರುತ್ತಿದ್ದು, ದೇವಸ್ಥಾನದ ವಠಾರದಲ್ಲಿ ಜಾತ್ರಾ ವ್ಯಾಪಾರ, ವಹಿವಾಟುಗಳನ್ನು ಮಾಡುತ್ತಾ ಹಿಂದೂಗಳಿಗೆ ವಂಚಿಸುವ ಕೃತ್ಯವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಹೆಣ್ಣು ಮಕ್ಕಳು
ಸೇರುತ್ತಿದ್ದು, ಅವರೊಂದಿಗೆ ಅನೇಕ ಅಸಭ್ಯ ವರ್ತನೆಗಳನ್ನು ಕೂಡಾ ವ್ಯಾಪಾರದ ಹೆಸರಿನಲ್ಲಿ ಬರು ಅನ್ಯಮತೀಯ ವ್ಯಕ್ತಿಗಳು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೇಲ್, ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ್, ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಉಪಾಧ್ಯಕ್ಷರಾದ ಸುರೇಶ್ ಬೆಂಜನಪದವು, ಕಾರ್ಯದರ್ಶಿ ದೀಪಕ್ ಅಜೆಕಳ, ಬಜರಂಗದಳದ ಸಹಸಂಚಾಲಕ ಸಂತೋಷ್ ಸರಪಾಡಿ, ಅಭಿನ್ ರೈ, ಲೋಕೇಶ್ ಪಲ್ಲಿಪಾಡಿ, ಸೌಮ್ಯ, ಕಿಶೋರ್ ಪಲ್ಲಿಪಾಡಿ ಮತ್ತಿತರರು ಉಪಸ್ಥಿತರಿದ್ದರು.














