Coastal Bulletin

ಬಂಟ್ವಾಳ: ಪುದು ಗ್ರಾ.ಪಂ.ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಸಂಜೆ ವರೆಗೆ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಫಲಿತಾಂಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅತೀ ಹೆಚ್ಚು ಸದಸ್ಯ ಸ್ಥಾನವನ್ನು ಪಡೆಯುವ ಮ‌ೂಲಕ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ.

21 ಸದಸ್ಯ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡರೆ ಎಸ್.ಡಿ.ಪಿ.ಐ. ಬೆಂಬಲಿತ 7 ಸದಸ್ಯರನ್ನು ಪಡೆದು ಕೊಂಡರೆ, ಬಿಜೆಪಿ ಬೆಂಬಲಿತ 6 ಸದಸ್ಯ ಸ್ಥಾನವನ್ನು ಪಡೆದಕೊಂಡಿದೆ.

ಕಳೆದ ಬಾರಿ 27 ಸದಸ್ಯ ರನ್ಹು ಪಡೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಆರು ಸ್ಥಾನವನ್ನು ಕಳೆದುಕೊಂಡಿದೆ.

ಅ ಮೂಲಕ ಕಾಂಗ್ರೆಸ್

ಗೆ ಪರೋಕ್ಷವಾಗಿ ತನ್ನ ಪ್ರಭಾವವನ್ನು ತೋರಿಸಿದ ಎಸ್.ಡಿ.ಪಿ.ಐ. ಒಂದರಿಂದ 7 ಕ್ಕೆರಿದ್ದು ಆರು ಸ್ಥಾನವನ್ನು ಹೆಚ್ಚಿಸಿಕೊಂಡಿದೆ .

ಬಿಜೆಪಿ ಯಥಾ ಸ್ಥಿತಿಯನ್ನು ಕಾಯ್ದುಕೊಂಡು ಆರಕ್ಕೆ ತೃಪ್ತಿಪಡೆದುಕೊಂಡಿದೆ. ಫೆ. 25 ಒಟ್ಟು 10 ವಾರ್ಡ್ ಗಳಲ್ಲಿ 34 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 99 ಅಭ್ಯರ್ಥಿಗಳು ಕಣದಲ್ಲಿದ್ದರು.

Leave a Comment