breaking news

Coastal Bulletin

ಬಂಟ್ವಾಳ :ಕೊಡ್ಮಾಣ್ ಶ್ರೀ ಕೋರ್ದಬ್ಬು ದೈವಸ್ಥಾನ ಇಲ್ಲಿನ ಶ್ರೀ ಕೋರ್ದಬ್ಬು ತನ್ನಿ ಮಾನಿಗ ಮತ್ತು ಸಪರಿವಾರ ದೈವಗಳ ವರ್ಷವಾದಿ ನೇಮೋತ್ಸವ ಮಾರ್ಚ್ .4 ಮತ್ತು 5ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಮಾರ್ಚ್ 4ರಂದು ಶನಿವಾರ ಬೆಳಿಗ್ಗೆ 9ಗಂಟೆಗೆ ಶ್ರೀ ಕೋರ್ದಬ್ಬು ತನ್ನಿ ಮಾನಿಗ ಮತ್ತು ಸಪರಿವಾರ ದೈವಗಳ ಭಂಡಾರ ಬಂದು , ಬೆಳಿಗ್ಗೆ ಗಂಟೆ 10 ರಿಂದ ಬ್ರಹ್ಮಶ್ರೀ ವೇದಮೂರ್ತಿ ಸುಜೀರ್ ಶ್ರೀ ಗಣೇಶ ಭಟ್ ಪೌರೋಹಿತ್ಯದಲ್ಲಿ ದೈವಸ್ಥಾನದ ವೈದಿಕ ಕಾರ್ಯಕ್ರಮಗಳಾದ,ಗಣಪತಿ ಹೋಮ ಕಲಶಾಭಿಷೇಕ ಮತ್ತು ಶ್ರೀ ಚಾಮುಂಡಿ ಗುಳಿಗ ದೈವದ ಪ್ರತಿಷ್ಠಾಪನೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ

ಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 10 ರಿಂದ ಶ್ರೀ ಕೋರ್ದಬ್ಬು ತನ್ನಿ ಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ, ಮಾ.5ರಂದು ಆದಿತ್ಯವಾರ ಸಂಜೆ 3 ರಿಂದ ಶ್ರೀ ಚಾಮುಂಡಿ ಮತ್ತು ಚಾಮುಂಡಿ ಗುಳಿಗ ದೈವಗಳ ನೇಮೋತ್ಸವ, ರಾತ್ರಿ ಗಂಟೆ 7:30ಯಿಂದ ಶ್ರೀ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.

ಮಾರ್ಚ್.6ರಂದು ಸೋಮವಾರ ಶ್ರೀ ದೈವಗಳ ಬಂಡಾರ ಇಳಿಯುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment