ಬಂಟ್ವಾಳ:ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್. ಪದ ಪ್ರಧಾನ ಹಾಗೂ ರಜತ ಸಂಭ್ರಮ ಸಮಾರಂಭ.

Coastal Bulletin
ಬಂಟ್ವಾಳ:ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್. ಪದ ಪ್ರಧಾನ ಹಾಗೂ ರಜತ ಸಂಭ್ರಮ ಸಮಾರಂಭ.

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮ ದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮ ದ ಉದ್ಘಾಟನೆಯನ್ನು ಅಭಿಮತ ಟಿವಿ ವಾಹಿನಿಯ ಪಾಲುದಾರರಾದ ಡಾ. ಮಮತಾ ಪಿ ಶೆಟ್ಟಿ ಯವರು ನೆರವೇರಿಸಿದರು.ವೇದಿಕೆಯಲ್ಲಿ ಯಸ್ ಕೆ ಪಿ ಎ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಲ ಅಧ್ಯಕ್ಷತೆಯನ್ನು ವಹಿಸಿ, ಉಮೇಶ್ ಕುಮಾರ್ ನ್ಯಾಯವಾದಿಗಳು, ಜೇಸಿಐ ಅಧ್ಯಕ್ಷರಾದ ಕಿಶೋರ್ ಕುಮಾರ್,ಯಸ್ ಕೆ ಪಿ ಎ ಸಂಚಾಲಕರಾದ ಗೋಪಾಲ್ ಸುಳ್ಯ, ಯಸ್ ಕೆ ಪಿ ವಿವಿದುದ್ದೇಶ ಸಹಕಾರಿ ಸಂಘ ದ ಅಧ್ಯಕ್ಷರಾದ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ

ಆನಂದ್ ಯಾನ್. ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಉಪಾಧ್ಯಕ್ಷ ರಾದ ದೇವರಾಜ್ ಶೆಟ್ಟಿ ಸುರತ್ಕಲ್, ದತ್ತಾತ್ರೇಯ ಕಾರ್ಕಳ, ವಲಯದ ನೂತನ ಅಧ್ಯಕ್ಷರಾದ ರಾಜೇಂದ್ರ ಕೆ. ಗೌ ರವಧ್ಯಕ್ಷರಾದ ಕಿಶೋರ್ ಕುಮಾರ್, ಪ್ರದಾನ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ರವರು ಉಪಸ್ಥಿತರಿದ್ದರು.

ಆನಂದ್ ಯಾನ್ ಪ್ರಾಸ್ತವಿಕದೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ರವಿಕಲ್ಪನೆ ಧನ್ಯವಾದ ವಿತ್ತರು, ಹೆಚ್ ಕೆ ನಯನಾಡ್ ಹಾಗು ದಯಾನಂದ್ ಬಂಟ್ವಾಳ್ ರವರು ಕಾರ್ಯಕ್ರಮ ನಿರೂಪಿಸಿದರು

Leave a Comment