ಕೊಡ್ಮಾಣ್: ಸೆ.29-ಅ.2ವರೆಗೆ, 37ನೇ ಶ್ರೀ ಶಾರದಾ ಪೂಜಾ ಮಹೋತ್ಸವ ಸಂಭ್ರಮ.

Coastal Bulletin
ಕೊಡ್ಮಾಣ್: ಸೆ.29-ಅ.2ವರೆಗೆ, 37ನೇ ಶ್ರೀ ಶಾರದಾ ಪೂಜಾ ಮಹೋತ್ಸವ ಸಂಭ್ರಮ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಅಶ್ರಯದಲ್ಲಿ 37ನೇ ವರುಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಸೆ. 29ರಿಂದ ಅ.2ರ ವರೆಗೆ ನಾಲ್ಕು ದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಪ್ರತಿದಿನ ಅನ್ನಸಂತರ್ಪಣೆ ಗಳೊಂದಿಗೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಕೊಡ್ಮಾಣ್ ಸರಕಾರಿ ಶಾಲೆಯ ಶಾರದಾ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ:

ಸೆ 28ರಂದು ಬೆಳಿಗ್ಗೆ 9:30 ಹೊರಕಾಣಿಕೆ ಕೊಡ್ಮಾಣ್ ಶ್ರೀ ಕೃಷ್ಣ ಕಟ್ಟೆ ಬಳಿಯಿಂದ ಶ್ರೀ ಶಾರದಾ ಪೂಜಾ ಮಂಟಪದ ವರೆಗೆ, ಶ್ರೀ ವರದೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಶ್ರೀ ಶಾರದಾ ವಿಗ್ರಹ ಸ್ವಾಗತ ಶೋಭಾಯಾತ್ರೆ,ಶಾರದಾ ಮಂಟಪದಲ್ಲಿ ವೈದಿಕ ಕಾರ್ಯಕ್ರಮಗಳು

ಸೆ.29 ಶ್ರೀ ಶಾರದಾ ಪ್ರತಿಷ್ಠೆ ಉತ್ಸವದ ಉದ್ಘಾಟನೆ, ಧ್ವಜಾರೋಹಣ, ಉದ್ಘಾಟನಾ ಸಮಾರಂಭ ಗಣಪತಿ ಹೋಮ ರಂಗ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮ ನಾಟಕ ಜೈ ಭಜರಂಗ ಬಲಿ.

ಸೆ.30 ಚಂಡಿಕಾಯಾಗ ಧಾರ್ಮಿಕ ಸಭೆ ಸ್ವಯಂವರ ಪಾರ್ವತೀ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮ - ಯಕ್ಷಗಾನ ಬಯಲಾಟ 'ಮಹಿಮೆದ ಮಂತ್ರದೇವತೆ'

ಅ.1 ಶ್ರೀ ಸೂಕ್ತಹೋಮ ಆಯುಧಪೂಜೆ ದುರ್ಗಾ ನಮಸ್ಕಾರ ಪೂಜೆ,ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ

ಅ.02 ಅಕ್ಷರಾರಂಭ ಪೂಜೆ

ದುರ್ಗಾಹೋಮ, ಸಾಂಸ್ಕೃತಿಕ ಕಾರ್ಯಕ್ರಮ,ಮಧ್ಯಾಹ್ನ 12.30ಕ್ಕೆ ಶ್ರೀ ಶಾರದಾ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ,ಅಪರಾಹ್ನ 3ರಿಂದ ವಿಸರ್ಜನೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ.

ಶ್ರೀ ಶಾರದಾ ಮಾತೆಯ ದಿಗ್ವಿಜಯ ಮೆರವಣಿಗೆ:

ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ ಇವರ ಕೀಲು ಕುದುರೆ, ಕರಗನೃತ್ಯ, ಬೊಂಬೆ ಕುಣಿತ ಸಮೂಹ ಚೆಂಡೆ ವಾದನ ಶಂಖ ಜಾಗಟೆ ಭಜನೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ಉತ್ಸವ ಸ್ಥಾನದಿಂದ ಕೊಡ್ಮಾಣ್, ನೆತ್ತರಕೆರೆ, ಕಾಪಿಕಾಡ್, ಕಬೇಲ ಸಂಚರಿಸಿ ಬಳಿಕ ವಿಸರ್ಜನಾ ಮಂಟಪದ ಆವರಣಕ್ಕೆ ತಲುಪುವುದು, ರಾತ್ರಿ ಗಂಟೆ 7.30ಕ್ಕೆ ವಿಸರ್ಜನಾ ಪೂಜೆಯ ಬಳಿಕ ಏಪದಗುರಿ ಅಪ್ಪಯ್ಯ ಮೂಲ್ಯರ ಮನೆತನದ ದೇವರ ಕೆರೆಯಲ್ಲಿ ಶ್ರೀ ಶಾರದಾ ವಿಗ್ರಹದ ಜಲಸ್ತಂಭನವಾಗುವುದು ಎಂದು ಸಂಘಟಕರು ಪ್ರಕಟಣೆ ತಿಳಿಸಿದ್ದಾರೆ.

Leave a Comment