ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ ಜಸ್ಟೀಸ್ ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ. ಎ.ಬಿ.ಶೆಟ್ಟಿ ಇನ್ಸ್ಟಿಟ್ಯೂಟ್ ಅಪ್ ಡೆಂಟಲ್ ಸೈನ್ಸ್ ದೇರಳಕಟ್ಟೆ ಇದರ ಸಹಯೋಗದಲ್ಲಿ ಪ್ರತಿ ಮಂಗಳವಾರ ನಡೆಯುವ 736ನೇ ಉಚಿತ ಕಣ್ಣು ದಂತ ವೈದ್ಯಕೀಯ ಶಿಬಿರವು ಅಕ್ಟೋಬರ್ 03, 10, 17, 31, ರಂದು ಸಮಯ ಬೆಳಿಗ್ಗೆ 9:00 ರಿಂದ 1ಗಂಟೆಯ ವರೆಗೆ ಸೇವಾಂಜಲಿ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ
ಈ ಶಿಬಿರದಲ್ಲಿ ಕಣ್ಣಿನ ತಜ್ಞ ವೈದ್ಯರು, ದಂತ ತಜ್ಞ ವೈದ್ಯರು, ಮಕ್ಕಳ ತಜ್ಞ ವೈದ್ಯರು, ಸಾಮಾನ್ಯ ರೋಗ ತಜ್ಞ ವೈದ್ಯರು,ಚರ್ಮರೋಗ ತಜ್ಞ ವೈದ್ಯರು, ಸ್ತ್ರೀ ರೋಗ ತಜ್ಞ ವೈದ್ಯರು, ಕಿವಿ ಮೂಗು ಗಂಟಲು ತಜ್ಞ ವೈದ್ಯರು ಲಭ್ಯವಿರುತ್ತಾರೆ.
ರೋಗ ಪತ್ತೆ ಹಚ್ಚಿ ಆಸ್ಪತ್ರೆಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ
ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ.ಕಣ್ಣಿನ ಶಸ್ತ್ರ ಚಿಕಿತ್ಸೆ, ಹೆರಿಗೆ,ಸಿಜೇರಿಯನ್ ಹೆರಿಗೆ ಮತ್ತು ಸೀಳು ತುಟಿ ವಿಕಲಾಂಗತೆಯನ್ನು ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಕೊಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















